ಬೋರ್​ವೆಲ್​ ಹೊಂಡದಿಂದ ಎದ್ದುಬಂದ ರೋಹಿತ್​ ಖಾರ್ವಿ; ಆರು ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ

Rescued 16 Feb 20
Published on

ಉಡುಪಿ: ಬೋರ್​ವೆಲ್​ ಕೊರೆಯುವಾಗ ಮಣ್ಣು ಕುಸಿದು, ಹೊಂಡದಲ್ಲಿ ಬಿದ್ದಿದ್ದ ರೋಹಿತ್ ಖಾರ್ವಿಯನ್ನು ರಕ್ಷಣೆ ಮಾಡಲಾಗಿದೆ.

ಬೈಂದೂರಿನ ಮರವಂತೆಯಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಘಟನೆ ನಡೆದಿತ್ತು. ಕೊಳವೆಬಾವಿ ತೋಡುತ್ತಿದ್ದಾಗ ಪೈಪ್​ ಸುತ್ತ ಮಣ್ಣು ಕುಸಿದಿದ್ದರಿಂದ ಸ್ಥಳದಲ್ಲಿದ್ದ ರೋಹಿತ್​ ಹೊಂಡದೊಳಗೆ 15 ಅಡಿ ಆಳಕ್ಕೆ ಬಿದ್ದಿದ್ದರು.

ಆತನನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರು. ಸ್ಥಳೀಯರೂ ಕೈ ಜೋಡಿಸಿದ್ದರು. ಸತತ ಆರು ಗಂಟೆ ಕಾರ್ಯಾಚರಣೆ ಮುಗಿದ ಬಳಿಕ ಅಂದರೆ ಮಧ್ಯಾಹ್ನ 3 ಗಂಟೆಗೆ ರೋಹಿತ್​ನನ್ನು ಹೊಂಡದಿಂದ ಹೊರತೆಗೆಯಲಾಗಿದೆ.

ರೋಹಿತ್​ಗೆ ಯಾವುದೇ ಗಾಯಗಳಾಗಿಲ್ಲ. ಆದರೂ ಆರೋಗ್ಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net