

ಪಡುಬಿದ್ರಿ: ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಕಾಪು ಶ್ರೀ ಹೊಸ ವಾರಿಗುಡಿಗೆ ಶುಕ್ರವಾರ ಭೇಟಿ ನೀಡಿ ವಾರಿಯಮ್ಮ ದರ್ಶನ ಪಡೆದು ನವದುರ್ಗಾ ಲೇಖನ ಸಂಕಲ್ಪ ಸ್ವೀಕರಿಸಿದರು.
ಉಚ್ಚಂಗಿ ಸಹಿತ ಶ್ರೀ ವಾರಿಯಮ್ಮನ ದರ್ಶನ ಪಡೆದ ಅವರು, ಸೇವೆಗಳ ಬಗ್ಗೆ ವಾಹಿತಿ ಪಡೆದುಕೊಂಡು ನವದುರ್ಗಾ ಲೇಖನ ಯಜ್ಞ ಪುಸ್ತಕವನ್ನು ಪಡೆದುಕೊಂಡರು. ತಾನು ಹಾಗೂ ಕುಟುಂಬದ ಎಲ್ಲ ಸದಸ್ಯರು ಈ ಲೇಖನವನ್ನು ಬರೆದು ಶ್ರೀ ಕ್ಷೇತ್ರಕ್ಕೆ ಶಾಶ್ವತ ಪೂಜೆಯೊಂದಿಗೆ ಸಮರ್ಪಿಸಲಿದ್ದೇವೆ ಎಂದು ತಿಳಿಸಿದರು.
ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ರೋಹಿಣಿ ಸಿಂಧೂರಿ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸದಸ್ಯ ರವೀಂದ್ರ ಮಲ್ಲಾರ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್.ಕೆ.ಶೆಟ್ಟಿ ಮಂಡೇಡಿ ಮತ್ತಿತರರು ಉಪಸ್ಥಿತರಿದ್ದರು.