

ಪಡುಬಿದ್ರಿ: ಎರ್ವಾಳು ತೆಂಕ ಕಿನಾರ ಗ್ಲೋಬಲ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಸಂಸತ್ತಿನ ಪದ ಪ್ರದಾನ ಕಾರ್ಯಕ್ರಮವನ್ನು ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು ಉದ್ಘಾಟಿಸಿ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿದರು.
ಮುಖ್ಯಶಿಕ್ಷಕಿ ಪ್ರೀತಿ ಸುವರ್ಣ ವಿದ್ಯಾರ್ಥಿ ನಾಯಕರಿಗೆ ಪ್ರವಾಣ ವಚನ ಬೋಧಿಸಿದರು. ಎರ್ವಾಳು ತೆಂಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕಿಶೋರ್ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ಎರ್ವಾಳು ತೆಂಕ ಮೊಗವೀರ ಸಭಾ ಅಧ್ಯಕ್ಷ ಲಿಂಗಪ್ಪ ಪುತ್ರನ್, ಶಾಲಾ ಶಿಕ್ಷಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಸುಮಿತಾ ಸ್ವಾಗತಿಸಿದರು. ಪೂರ್ಣಿವಾ ವಂದಿಸಿದರು. ಸುಶಾಂಕ ನಿರೂಪಿಸಿದರು.