

ಬೆಂಗಳೂರು: ಪರಿಸರ ಸಂರಕ್ಷಣೆ ಅತ್ಯಂತ ಸವಾಲಿನ ಕೆಲಸವಾಗಿದ್ದು, ಅರಣ್ಯರಕ್ಷಕರು ಇದನ್ನು ಶಿಸ್ತಿನಿಂದ ನಿಭಾಯಿಸುತ್ತಿರುವುದು ಶ್ಲಾನೀಯ. ಇಂದಿನ ಯುವಜನರೂ ಪರಿಸರ ಸಂರಕ್ಷಣಾ ಮನೋಭಾವ ಬೆಳಸಿಕೊಳ್ಳಬೇಕು ಎಂದು ಬಿಸಿಸಿಐ ಅಧ್ಯ ರೋಜರ್ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ವನ್ಯಜಿವಿ ಸೇವಾ ಪ್ರಶಸ್ತಿ' ಪ್ರದಾನ ಮಾಡಿ ಮಾತನಾಡಿದರು.
ನನಗೆ ಕ್ರಿಕೆಟ್ ಹಾಗೂ ಕಾಡು ಎಂದರೆ ಬಹಳ ಇಷ್ಟ. ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಮಯ ಕಳೆಯಲು ಬಯಸುತ್ತೇನೆ. ಪರಿಸರದಲ್ಲಿ ಸುತ್ತಾಡಿದಾಗ ಮಾತ್ರ, ವಾಸ್ತವದಲ್ಲಿ ಏನೆಲ್ಲ ಸಮಸ್ಯೆಗಳಿವೆ ಎಂಬುದು ಅರ್ಥವಾಗುತ್ತದೆ. ಅವಕಾಶ ಸಿಕ್ಕಾಗೆಲ್ಲ ಪರಿಸರದೊಂದಿಗೆ ಸಮಯ ಕಳೆಯಿರಿ ಎಂದು ಕಿವಿಮಾತು ಹೇಳಿದರು.
ಯುವ ಕ್ರಿಕೆಟಿಗರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿರುವ ಟೈಗರ್ ಕಪ್ 2010ರಿಂದ ಯಶಸ್ವಿಯಾಗಿ ಆಯೋಜನೆ ಮಾಡುತ್ತಾ ಬಂದಿದೆ. ಇಂತಹ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಗುಣಮಟ್ಟದ ಆಟವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶ್ರದ್ಧೆಯಿಂದ, ಕಷ್ಟಪಟ್ಟು ತರಬೇತಿ ಪಡೆದುಕೊಂಡರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದರು.
ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ಪಾಲುದಾರ ಕಿರಣ್ ರಂಗ ಮಾತನಾಡಿ, ಅರಣ್ಯ ಹಾಗೂ ವನ್ಯಜಿವಿಗಳನ್ನು ರಸಲು ನಿರಂತರ ಶ್ರಮ ವಹಿಸುತ್ತಿರುವ ಅರಣ್ಯ ರಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ನಿಸರ್ಗವನ್ನು ಸಂರಕ್ಷಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಟೈಗರ್ಕಪ್ನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್ ಹೋವರ್, ಮಧು ಜವಳಿ, ನಿಪ್ಪೋನ್ ಪೈಂಟ್ನ ವಿಭಾಗೀಯ ಮಾರಾಟ ವ್ಯವಸ್ಥಾಪಕ ಎನ್.ಜಯಸಿಂಹ, ಸಿಡ್ವಿನ್ ಸಂಸ್ಥೆಯ ಆಶಾ, ಮಾಜಿ ಕ್ರಿಕೆಟಿಗ ಶಿವಪ್ರಸಾದ್ ಮಂಜುನಾಥ್ ಮತ್ತಿತರರಿದ್ದರು.
ದಿನದಿಂದ ದಿನಕ್ಕೆ ಮಾನವ ಮತ್ತು ವನ್ಯಜಿವಿ ನಡುವೆ ಸಂರ್ಷ ಹೆಚ್ಚುತ್ತಿದೆ. ಕಾಡು ಉಳಿದರೆ ಮಾತ್ರ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. -ಡಿ.ಸಿದ್ದೇಶ್, ಪ್ರಶಸ್ತಿ ಪುರಸತ
ಅರಣ್ಯ ರಕರಾದ ಡಿ. ಸಿದ್ದೇಶ್ ಮತ್ತು ತಿರುಪತಿ ಪೂಜಾರ ಅವರಿಗೆ "ವನ್ಯಜಿವಿ ಸೇವಾ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿಯು1 ಲಕ್ಷ ರೂ. ನಗದು ಒಳಗೊಂಡಿದೆ. ಇದೇ ವೇಳೆ ವನ್ಯ ಪ್ರಾಣಿಗಳ ರಣೆಗೆ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪರವಾಗಿ ರಾಜ್ಕುಮಾರ್ ದೇವರಾಜೇ ಅರಸ್ ಹಾಗೂ ಮೀರಾ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು.