

ಕಲಬುರಗಿ: ರೈಲು ಸುರಂಗ ಮಾರ್ಗದಲ್ಲಿನ ಹಳಿಯ ಮೇಲೆ ಬಂಡೆ ಬಿದ್ದ ಕಾರಣ ಸೋಮವಾರ ಎರಡು ಕಲಬರ್ಗಿ-ಬೀದರ್ ನಡುವೆ ಎರಡು ಘಂಟೆಗಳ ಕಾಲ ಟ್ರೈನ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಘಟನೆಯೂ ಬೀದರ್-ಕಲಬುರ್ಗಿ ನಡುವಿನ ಕಮಲಾಪುರದ ಮರಗುತ್ತಿಯಲ್ಲಿ ನಡೆದಿದ್ದು, ಬೆಳಗ್ಗೆ 9 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಥಳಲ್ಲೆ ಆಗಮಿಸಿದ ರೈಲ್ವೆ ಇಲಾಖೆಯ ಸಿಬ್ಬಂದಿ ಬಂಡೆಯನ್ನು ರೈಲಿನ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬೆಳಗ್ಗೆ 7:30ಕ್ಕೆ ಬೀದರ್ನಿಂದ ಕಲಬುರ್ಗಿ ಕಡೆ ಹೊರಟಿದ್ದ ಡೆಮು ರೈಲು 9 ಘಂಟೆ ಸುಮಾರಿಗೆ ಮರಗುತ್ತಿ ಸುರಂಗ ಮಾರ್ಗ ಪ್ರವೇಶಿಸಿದೆ. ಟನಲ್ನೊಳಗೆ ರೈಲು ಸಂಚರಿಸುವ ವೇಳೆ ಮೇಲಿನಿಂದ ಬಂಡೆಯೊಂದು ಕಳಚಿ ಬಿದ್ದಿದೆ. ಕೂಡಲೇ ಎಚ್ಚೆತ್ತ ಲೋಕೋ ಪೈಲಟ್ ರೈಲಿನ ವೇಗವನ್ನು ಕಡಿಮೆ ಮಾಡಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಇದನ್ನೂ ಓದಿ: ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಅವಘಡ; ಹಲವರಿಗೆ ಗಾಯ
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಬಂಡೆಯನ್ನು ಕಡಿದು ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 11:20ರ ವೇಳೆಗ ರೈಲು ಕಲಬುರ್ಗಿ ಸ್ಟೇಷನ್ ತಲುಪಿತ್ತು. ಅಷ್ಟರಲ್ಲಾಗಲೇ ರೈಲಿನಲ್ಲಿದ್ದ ಅರ್ಧಕ್ಕೂ ಹೆಚ್ಚು ಪ್ರಯಾಣಿಕರು ಕಾಲ್ನಡಿಗೆ ಮೂಲಕ ಕಮಲಾಪುರಕ್ಕೆ ಬಂದು ಬಸ್ ಮೂಲಕ ತೆರಳಿದ್ದರು.
ಘಟನೆ ಕುರೊಇತು ಪ್ರತಿಕ್ರಯಿಸಿರುವ ಪ್ರಯಾಣಿಕರೊಬ್ಬರು ಸುರಂಗ ಮಾರ್ಗದ ಮಧ್ಯದಲ್ಲಿ ಮೆಷ್ ಹಾಕಿ ಸಿಮೆಂಟ್ ಹಾಕಲಾಗಿದೆ. ಇದು ಕಚ್ಚಾ ಕಾಮಗಾರಿಯಾಗಿದ್ದು ಬಂಡೆ ಕಳಚಿ ಬಿದ್ದಿದೆ. ಸುರಂಗ ಮಾರ್ಗದುದ್ದಕ್ಕೂ ಕಬ್ಬಿಣ್ಣದ ರಾಡ್ಗಳನ್ನು ಹಾಕಿ ಆರ್ಸಿಸಿಯಿಂದ ಮುಚ್ಚಬೇಕಿತ್ತು. ಮಳೆಗಾಲ ಆಗಿರುವುದರಿಂದ ಗುಡ್ಡಗಳು ಮೇಲಿನಿಂದ ಬೀಳುವ ಸಾಧ್ಯತೆ ಹೆಚ್ಚಿದೆ. ರೈಲ್ವೆ ಇಲಾಖೆಯವರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.