

ಮಂಗಳೂರು: ಖಾಸಗಿ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ಗೆ ರಾತ್ರೋರಾತ್ರಿ ನುಗ್ಗಿ ವಿದ್ಯಾರ್ಥಿನಿಯೊಬ್ಬರ ಮಾನಭಂಗ ಮಾಡಿ ಹಣ ದರೋಡೆ ನಡೆಸಿದ್ದ ದುಷ್ಕರ್ಮಿಗೆ ದಕ್ಷಿಣ ಕನ್ನಡ ಜಿಲ್ಲೆಯ 6ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಮೂಲದ ನಾಗೇಶ್ ಅಲಿಯಾಸ್ ನಾಗ(30) ಅಪರಾಧಿ. ಮಂಗಳೂರಿನ ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ 2017ರ ಡಿಸೆಂಬರ್ 4ರಂದು ದೇರಳಕಟ್ಟೆ ಸಮೀಪ ಬಂದಿದ್ದ. ಅಲ್ಲಿರುವ ವೈದ್ಯಕೀಯ ಕಾಲೇಜು ಬಳಿ ಸುತ್ತಾಡುತ್ತಿದ್ದ ನಾಗೇಶ್, ಮರುದಿನ ಅಂದ್ರೆ ಡಿಸೆಂಬರ್ 5ರ ರಾತ್ರಿ 2 ಗಂಟೆ ಸುಮಾರಿಗೆ ಕಾಲೇಜು ವಿದ್ಯಾರ್ಥಿನಿಯರಿದ್ದ ಹಾಸ್ಟೆಲ್ಗೆ ನುಗ್ಗಿದ್ದ. ಕಟ್ಟಡದ ಪೈಪ್ ಹಿಡಿದುಕೊಂಡು ಮೇಲಕ್ಕೆ ಹತ್ತಿದ್ದ ದುಷ್ಕರ್ಮಿ ಮೂರನೇ ಮಹಡಿಗೆ ನುಗ್ಗಿದ್ದ. ಜತೆಗೆ ಕಬ್ಬಿಣದ ರಾಡ್ ಅನ್ನೂ ತಂದಿದ್ದ. ಕೆಲ ಕೋಣೆಗಳ ಬಾಗಿಲನ್ನು ತಳ್ಳಿದ್ದ. ಆ ಪೈಕಿ ತೆರೆದಿದ್ದ ಒಂದು ಬಾಗಿಲ ಒಳಹೊಕ್ಕ ದುಷ್ಕರ್ಮಿ, ಕೋಣೆಯಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿಗೆ ರಾಡ್ನಿಂದ ಬೆದರಿಸಿದ್ದ. ಇದನ್ನೂ ಓದಿರಿ 4 ತಿಂಗಳ ಭ್ರೂಣ ಹೊಟ್ಟೆಯಲ್ಲಿರುವಾಗಲೇ ಗೃಹಿಣಿ ಆತ್ಮಹತ್ಯೆ!