ದರೋಡೆಕೋರರಿಂದ 4 ಕ್ವಿ. ಅಡಕೆ ವಶ

111
Published on

ಚನ್ನಗಿರಿ: ಮನೆ ದರೋಡೆ ಮತ್ತು ಕಳ್ಳತನದಲ್ಲಿ ಭಾಗಿಯಾಗಿದ್ದ ಮೂವರನ್ನು ಚನ್ನಗಿರಿ ಪೊಲೀಸರು ಬಂಧಿಸಿ ಅವರಿಂದ 30 ಸಾವಿರ ರೂ. ನಗದು, 2.20 ಲಕ್ಷ ರೂ. ಬೆಲೆಬಾಳುವ ನಾಲ್ಕೂವರೆ ಕ್ವಿಂ. ಅಡಕೆ ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಓಮಿನಿ ವ್ಯಾನ್ ಅನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹೊಸೂರು ಗ್ರಾಮದ ಲಾರಿ ಚಾಲಕ ಮಹ್ಮದ್ ಶಫೀವುಲ್ಲಾ, ಶೇಕ್ ಮುಕ್ತಿಯಾರ್ ಆಲಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು.

ತಾಲೂಕಿನ ದೇವರಹಳ್ಳಿ ಗ್ರಾಮದ ಗೋರಪ್ಪ ಅವರ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಜು.7 ರಂದು ದೂರು ದಾಖಲಾಗಿತ್ತು.

ಪೊಲೀಸರು ಪ್ರಕರಣದ ಬೆನ್ನತ್ತಿ ಹೋದಾಗ ದರೋಡೆಕೋರರು ಸಿಕ್ಕಿಬಿದ್ದಿದ್ದಾರೆ. ಅರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ತಾಲೂಕಿನ ಮುದ್ದೇನಹಳ್ಳಿ, ಪಾಂಡೋಮಟ್ಟಿ ಗ್ರಾಮದಲ್ಲಿ ಕಳ್ಳತನ ಮಾಡಲಾಗಿದ್ದ ನಾಲ್ಕೂವರೆ ಕ್ವಿಂಟಾಲ್ ಅಡಕೆ ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್‌ಕುಮಾರ್, ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಲಿಂಗನಗೌಡ ನೆಗಲೂರು ನೇತೃತ್ವದ ತಂಡದಲ್ಲಿ ಪಿಎಸ್‌ಐ ಸೈಪುದ್ದೀನ್, ಎಎಸ್‌ಐ ಶಶಿಧರ್, ಸಿಬ್ಬಂದಿ ಬೀರೇಶ್ ಪುಟ್ಟಕ್ಕನವರ್, ನರೇಂದ್ರಸ್ವಾಮಿ, ಶ್ರೀನಿವಾಸ ಮೂರ್ತಿ, ರೇವಣಸಿದ್ದಪ್ಪ, ರಮೇಶ್, ಚನ್ನಕೇಶವ, ಚಾಲಕ ರೇವಣ ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net