ಕೇರಳ ಗಡಿಯಲ್ಲಿ ದರೋಡೆಕೋರರ ಬಂಧನ: ಸಹ ನಿರ್ದೇಶಕ, ಇಂಜಿನಿಯರಿಂಗ್ ವಿದ್ಯಾರ್ಥಿಯು ಭಾಗಿ!

Robbers
Published on

ಕೊಡಗು: ವಿರಾಜಪೇಟೆ ಪೊಲಿಸರು ನಡೆಸಿದ ಭರ್ಜರಿ ಕಾರ್ಯಚರಣೆಯಲ್ಲಿ ವಿರಾಜಪೇಟೆ- ಕೇರಳ ಗಡಿಯಲ್ಲಿ ಸುಲಿಗೆ ಮಾಡುತ್ತಿದ್ದ 9 ಮಂದಿ ದರೋಡೆಕೊರರನ್ನು ಯಶಸ್ವಿಯಾಗಿ ಬಂಧಿಸಲಾಗಿದೆ. ಆಘಾತಕಾರಿಯೆಂದರೆ ದರೋಡೆ ಗ್ಯಾಂಗ್​ನಲ್ಲಿ ಸಿನಿಮಾ ಅಸೋಷಿಯೇಟ್ ಡೈರೆಕ್ಟರ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಯು ಸಹ ಭಾಗಿಯಾಗಿದ್ದಾರೆ.

ಬಂಧಿತರನ್ನು ರಾಮನಗರದ ಸಿನಿಮಾ ಅಸೋಷಿಯೇಟ್ ಡೈರೆಕ್ಟರ್ ಕೆ.ಎಸ್. ಸತೀಶ್ (33), ವಿ.ನಾರಾಯಣ ಸ್ವಾಮಿ, ಕೇರಳ ರಾಜ್ಯದ ಕೆ.ವಿ.ಅಭಿನವ್ (20), ಜಿ. ವೈಷ್ಣವ್(22), ತಮಿಳುನಾಡಿನ ಸಿ.ಸುರೇಶ್ (32), ಹಾಸನದ ಜಾನ್ ಪೌಲ್(28), ಬೆಂಗಳೂರು ಜ್ಞಾನೇಂದ್ರ ಪ್ರಸಾದ್‌(28), ಮೈಸೂರಿನ ಡಿ.ಎಚ್. ವಾದಿರಾಜ್ (25) ಎಂದು ಗುರುತಿಸಲಾಗಿದೆ.

ಅಂತರಾಜ್ಯ ಗಡಿಯಲ್ಲಿ ಹೊಂಚು ಹಾಕಿ‌‌ಕುಳಿತಿದ್ದ ಆರೋಪಿಗಳ ಬಳಿ ಲಾಂಗ್ ಮಚ್ಚು, ಎರಡು ತಲವಾರು, ಖಾರದ ಪುಡಿ ಮತ್ತು ಎಂಟು ಕೆಜಿ ಪಾದರಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ಗಡಿಯಲ್ಲಿ ದರೋಡೆಗೆ ಹೊಂಚು ಹಾಕಿ‌ ಎರಡು ಟೀಮ್​ ಎರಡು ಕಾರಿನಲ್ಲಿ ಕುಳಿತಿತ್ತು. ಈ ವೇಳೆ ವಿರಾಜಪೇಟೆ ಸಬ್ ಇನ್ಸ್‌ಪೆಕ್ಟರ್ ಬೊಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ಯಶಸ್ವಿಯಾಗಿದ್ದು, ಆರೋಪಿಗಳು ಹದಿನೈದು ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ.

ಬಂಧಿತ ದರೋಡೆಕೊರರಲ್ಲಿ ಒಬ್ಬನಿಗೆ ಕೊರೊನಾ ಹಿನ್ನಲೆ ಆತನನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net