

ಕೂಡ್ಲಿಗಿ: ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತ ತಡೆಗಟ್ಟಲು ಮುಂದಾಗಬೇಕು ಎಂದು ಗುಡೇಕೋಟೆ ಠಾಣೆ ಪಿಎಸ್‌ಐ ಮಾಲಿಕ್‌ಸಾಬ್ ಕಲಾರಿ ಹೇಳಿದರು.
ಗುಡೇಕೋಟೆಯಲ್ಲಿ ಭಾನುವಾನ ವಾಹನ ಚಾಲಕರು, ಮಾಲೀಕರಿಗೆ ಅರಿವು ಮೂಡಿಸಿದರು. ಚಾಲಕರ ಅತಿ ವೇಗದ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರೂ ಚಾಲನಾ ಪರವಾನಗಿ ಮತ್ತು ವಾಹನದ ದಾಖಲೆಗಳನ್ನು ಹೊಂದಿರಬೇಕು.
ಒಂದು ವೇಳೆ ಅಪಘಾತ ಸಂಭವಿಸಿದಾಗ ದಾಖಲಾತಿ ಸರಿಯಾಗಿದ್ದರೆ ನಿಮಗೆ ಮತ್ತು ನೊಂದವರಿಗೂ ಅನುಕೂಲವಾಗಲಿದೆ ಎಂದರು. ಎಎಸ್‌ಐ ಫಕೃದ್ದೀನ್, ಸಿಬ್ಬಂದಿ ಸ್ವರೂಪ್ ಕೊಟ್ಟೂರು, ಬಂಡೆ ರಾಘವೇಂದ್ರ ಇದ್ದರು.