ರಸ್ತೆ ಒತ್ತುವರಿ ತೆರವಿಗೆ ಸಾರ್ವಜನಿಕರ ಮನವಿ

3 MANVI 03
ಮಾನ್ವಿ ಪುರಸಭೆ ವ್ಯವಸ್ಥಾಪಕ ಕೆ.ನರಸಿಂಹ ಅವರಿಗೆ 15ನೇ ವಾರ್ಡ್ ನಿವಾಸಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಜಾವೀದ್‌ಖಾನ್, ಮಹ್ಮದ್ ಸಲೀಮ್, ಆಹ್ಮದ್, ಶಿವರಾಜ ಇತರರಿದ್ದರು.
Published on

ಮಾನ್ವಿ: ಪಟ್ಟಣದ 15ನೇ ವಾರ್ಡ್‌ನ ಬೇರಬನ್ ಮಸೀದಿ ಮರಕಸ್ ಮುಂಭಾಗದ ರಸ್ತೆ ಒತ್ತುವಾರಿಯಾಗಿದ್ದು, ಪುರಸಭೆ ಅಧಿಕಾರಿಗಳು ರಸ್ತೆ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.

ಪುರಸಭೆ ವ್ಯವಸ್ಥಾಪಕ ಕೆ.ನರಸಿಂಹಗೆ ಮನವಿ ಸಲ್ಲಿಸಿ, ಅಧಿಕಾರಿಗಳು ಒತ್ತುವರಿಯನ್ನು ತೆರವು ಮಾಡಬೇಕು. ಇದರಿಂದ ಬೇರಬನ್ ಮಸೀದಿ ರಸ್ತೆಯಲ್ಲಿ ಓಡಾಟಕ್ಕೆ ಅನುಕೂಲವಾಗಲಿದೆ. ರಸ್ತೆ ಇಕ್ಕಟ್ಟಾಗಿದ್ದರಿಂದ ವಾಹನ ಸಂಚಾರಕ್ಕೆ ಅಡೆ-ತಡೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದರು.

ವಾರ್ಡ್‌ನ ನಿವಾಸಿಗಳಾದ ಬಿ.ಫಯಾಜ್ ಹುಸೇನ್, ಬಿ.ಇಸಾಕ್, ಜಾಲಾಲ್ ಮೆಕ್ಯಾನಿಕ್, ಶೇಖ್ ನವಾಜ್, ಬಿ.ಜಾಕೀರ್ ಹುಸೇನ್, ಎಂ.ಡಿ.ಅಲಂಬಾಷಾ, ಮುಖಮ್ಮಿಲ್, ಆಲ್ತಾಫ್ ಹುಸೇನ್, ರಹೀಮ್ ಆಟೋ, ಸಾದಿಕ್ ಹುಸೇನ್.ಬಿ.ಶೇಖ ಮುಕ್ತಿಯಾರ್, ಮಹ್ಮದ್ ಉಮೇರ್, ರೇವಣ್ಣ ಸಿದ್ದಯ್ಯ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net