

ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ
ರಾಷ್ಟ್ರೀಯ ಹೆದ್ದಾರಿ4ರ ಪಕ್ಕದಲ್ಲಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಒಳಪ್ರವೇಶದ ಲೋಕೋಪಯೋಗಿ ಇಲಾಖೆಯ ರಸ್ತೆ ಇಕ್ಕಟ್ಟಾಗಿರುವ ಕಾರಣಕ್ಕೆ ನಿತ್ಯ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.
ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಎಂ.ಕೆ.ಹುಬ್ಬಳ್ಳಿ. ಗಂಗಾಬಿಕೆ ಐಕ್ಯಸ್ಥಳ ಇರುವ ಪುಣ್ಯ ಭೂಮಿ. ಇದೇ ಕಾರಣಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಪಟ್ಟಣದ ಒಳಪ್ರವೇಶದ ಮುಖ್ಯ ರಸ್ತೆಯಲ್ಲಿ ಅಂತೂ ಟ್ರಾಫಿಕ್ ಸಮಸ್ಯೆ ಹೇಳ ತೀರದ್ದಾಗಿದೆ. ಇದರ ಜತೆಗೆ ರಸ್ತೆ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಬರುವ ಜನರು ರಸ್ತೆ ಪಕ್ಕದಲ್ಲೇ ವಾಹನಗಳ ನಿಲುಗಡೆ ಮಾಡುವುದರಿಂದಲೂ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.
ಪ್ರವಾಸಿಗರಿಗೂ ಸಂಕಷ್ಟ: ರಾಷ್ಟ್ರೀಯ ಹೆದ್ದಾರಿ&4ರ ಪಕ್ಕದಲ್ಲಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಒಳಪ್ರವೇಶದ ಲೋಕೋಪಯೋಗಿ ರಸ್ತೆಯಾಗಿದೆ. ಹೀಗಾಗಿ ದೂರದೂರುಗಳಿಂದ ಗೋವಾ ಪ್ರವಾಸಕ್ಕೆ ಮತ್ತು ಖಾನಾಪುರ, ಜಾಂಬೋಟಿ ಕಡೆ ತೆರಳುವ ಹಾಗೂ ಅಲ್ಲಿಂದ ಮರಳುವ ಪ್ರಯಾಣಿಕರು ಗೂಗಲ್ ಮ್ಯ್ಾ ಆಧರಿಸಿ ಇದೇ ರಸ್ತೆ ಮೂಲಕ ಪ್ರಯಾಣಿಸುತ್ತಾರೆ. ಆದರೆ, ಟ್ರಾಫಿಕ್ ಸಮಸ್ಯೆಯಿಂದ ಪ್ರವಾಸಿಗರೂ ಪರದಾಡುತ್ತಿದ್ದಾರೆ.
ಆಂಬುಲೆನ್ಸ್ ಸಂಚಾರವೂ ಕಷ್ಟಕರ: ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡೆ ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ತುರ್ತು ಆರೋಗ್ಯ ಸಮಸ್ಯೆ ವೇಳೆ ತೆರಳಲು ರೋಗಿಗಳಿಗೆ ಟ್ರಾಫಿಕ್ ಸಮಸ್ಯೆ ಕಂಟಕವಾಗುತ್ತಿದೆ. ಬೆಳಗಾವಿ ಆಸ್ಪತ್ರ್ರೆಗಳಿಗೆ ಊರೊಳಗಿಂದ ರೋಗಿಗಳನ್ನು ಹೊತ್ತು ಆಸ್ಪತ್ರೆಗೆ ಸಾಗಲು ಆಂಬುಲೆನ್ಸ್ ಸುಗಮ ಸಂಚಾರಕ್ಕೂ ಇಕ್ಕಟ್ಟಾದ ರಸ್ತೆಯಲ್ಲಿ ದಾರಿಯಿಲ್ಲದಂತಾಗಿದೆ.
ಅಗಲೀಕರಣವಾಗದ ರಸ್ತೆ: ಇಕ್ಕಟ್ಟಾದ ರಸ್ತೆಯನ್ನು ಒಂದಿಷ್ಟು ಅಗಲೀಸಬೇಕೆಂದು ಈ ಹಿಂದೆ ಸ್ಥಳಿಯ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಧಾರ ಕೆಗೊಂಡಿತ್ತು. ಇದಕ್ಕಾಗಿ ರಸ್ತೆ ಅಗಲೀಕರಣದ ಅಳತೆ ಗುರುತಿಸಲಾಗಿತ್ತು. ಆದರೆ, ಆ ಕೆಲಸ ಅಲ್ಲಿಗೆ ಸ್ಥಗಿತಗೊಂಡು ಇಕ್ಕಟ್ಟಾದ ರಸ್ತೆಗೆ ಡಾಂಬರ್ ಹಾಕಲಾಯಿತು.
ಪಟ್ಟಣ ಬೆಳೆದಂತೆ ರಸ್ತೆಯೂ ಅಗಲೀಕರಣವಾಗಬೇಕು. ಪ್ರತಿದಿನ ಜನರು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು.
> ಪಕ್ಕೀರಪ್ಪ ಸಕ್ರೆನ್ನವರ ಜಿಪಂ ಮಾಜಿ ಸದಸ್ಯ
ಟ್ರಾಫಿಕ್ ಸಮಸ್ಯೆ ತೀವ್ರವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಕೇಳಿಬಂದಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಅವರ ಗಮನಕ್ಕೆ ತರಲಾಗಿದೆ. ರಸ್ತೆ ಅಗಲೀಕರಣ ಮಾಡಿ, ಸುಗಮ ಸಂಚಾರಕ್ಕೆ ಅನುವೂ ಮಾಡಲು ಕ್ರಮಕೆಗೊಳ್ಳಲಾಗುವುದು.
> ರವಿಶಂಕರ ಮಾಸ್ತಿಹೊಳಿಮಠ
ಮುಖ್ಯಾಧಿಕಾರಿ ಪಪಂ ಎಂ.ಕೆ.ಹುಬ್ಬಳ್ಳಿ.