ಮುಧೋಳದಲ್ಲಿ ರಸ್ತೆ ತಡೆದು ಪ್ರತಿಭಟನೆ

Road blocking protest in Mudhol
ಮುಧೋಳದಲ್ಲಿ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ಸಂಚಾರ ತಡೆದು ರೈತರು ಹಾಗೂ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ, ಈರಪ್ಪ ಹಂಚನಾಳ, ಆನಂದ ಮಾಳಿ, ಸುರೇಶ ಚಿಂಚಲಿ ಇತರರಿದ್ದರು.
Published on

ಮುಧೋಳ: ಯಲ್ಲಪ್ಪ ಹೆಗಡೆ ಮೇಲಿನ ಹಲ್ಲೆ ಖಂಡಿಸಿ ರೈತರು, ಹೋರಾಟಗಾರು ನಗರದ ಯಾದವಾಡ ಕ್ರಾಸ್ ಬಳಿಯ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಯಾದವಾಡ ಕ್ರಾಸ್ ಬಳಿ ನೂರಾರು ರೈತರು ಜಮಾಯಿಸಿ ಅಂದಾಜು ಮೂರು ಗಂಟೆ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ, ರೈತ ನಾಯಕ ಮುತ್ತಪ್ಪ ಕೋಮಾರ ಮಾತನಾಡಿ, ಸಮಾಜದಲ್ಲಿ ಹೋರಾಟಗಾರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿರುವುದು ಖಂಡನೀಯ. ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ನ್ಯಾಯವಾದಿ ಲಕ್ಕಪ್ಪ ಸುನಗದ ಮಾತನಾಡಿ, ಮುಂದೆ ಇಂಥ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ, ಈರಪ್ಪ ಹಂಚನಾಳ, ಆನಂದ ಮಾಳಿ, ಸುರೇಶ ಚಿಂಚಲಿ, ಸುಭಾಷ ಶಿರಬೂರ,ದುಂಡಪ್ಪ ಯರಗಟ್ಟಿ, ಹನುಮಂತ ಶಿಂಧೆ ಸೇರಿ ನೂರಾರು ರೈತರು, ಹೋರಾಟಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net