ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

pkps
ಲೋಕಾಪುರ ಸಮೀಪದ ದಾದನಟ್ಟಿ-ಕಿಲ್ಲಾ ಹೊಸಕೋಟಿ ಪಿಕೆಪಿಎಸ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸನ್ಮಾನಿಸಿದರು.
Published on

ಲೋಕಾಪುರ: ಹೈಕೋರ್ಟ್ ತಡೆ ಹಿಡಿದಿದ್ದ ದಾದನಟ್ಟಿ-ಕಿಲ್ಲಾ ಹೊಸಕೋಟಿ ಪಿಕೆಪಿಎಸ್ ಚುನಾವಣೆ ಲಿತಾಂಶ ಸೋಮವಾರ ಹೊರಬಿದ್ದಿದ್ದು, 10 ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಇಬ್ಬರು ಜಯಶಾಲಿಯಾಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ 20 ದಿವಸಗಳ ನಂತರ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ರಾಮನಗೌಡ ಪಾಟೀಲ, ರಾಮನಗೌಡ ಪಾಟೀಲ, ಚಂದ್ರಕಾಂತ ಹಿತ್ತಲಮನಿ, ಚಿನ್ನಪ್ಪ ಕಿಲಬನೂರ, ದುಂಡಪ್ಪ ಪಾಟೀಲ, ಮುಪ್ಪಣ್ಣ ಪರಮೇಶ್ವರ, ಯಶೋಧಾ ಶಾನೂರ, ಯಶೋಧಾ ಸಂಗಣ್ಣವರ, ಹಣಮಂತ ಮುಳ್ಳೂರ, ಶಾಂತಪ್ಪ ಮುಸ್ಕಣ್ಣವರ, ಮಾದೇವಿ ಚೊಳಪ್ಪಗೋಳ, ಗೋವಿಂದಪ್ಪ ದಾಸರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ವಿ.ಜಮಾದಾರ ತಿಳಿಸಿದ್ದಾರೆ.
ಸಂಘದ ಆವರಣದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಲ್ಲನಗೌಡ ಪೊಲೀಸ್ ಪಾಟೀಲ, ಸುರೇಶ ಸೊಕನಾದಗಿ, ರಮೇಶ ಪರಮೇಶ್ವರ, ನಾಗಪ್ಪ ಪೂಜಾರ, ವೆಂಕಣ್ಣ ಲಕ್ಕಣ್ಣವರ, ರಾಮಣ್ಣ ಕೃಷ್ಣಗೌಡರ, ರಂಗಪ್ಪ ಮಾಲಬಸರಿ, ರಮೇಶ ಪುರವಾರ, ತಿಪ್ಪಣ್ಣ ತುಬಾಕಿ, ವೆಂಕಟ ಪೂಜಾರ, ಮೌನೇಶ ಪತ್ತಾರ, ಕೃಷ್ಣಾ ಗಲಗಲಿ, ಭೀಮನಗೌಡ ಪಾಟೀಲ, ಸುಭಾಷ ಗಲಗಲಿ, ಹಣಮಂತ ಮುಳ್ಳೂರ ಇದ್ದರು.
ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಯಶಾಲಿ ಅಭ್ಯರ್ಥಿಗಳಿಗೆ ಹೂ ಮಾಲೆ ಹಾಕಿ ಸಿಹಿ ಹಂಚಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net