ರಸ್ತೆ ಅಪಘಾತಕ್ಕೆ ಬಲಿ

hand-dead-victim-woman-covered-600nw-2193737127
Published on

ಕಾಸರಗೋಡು: ಪಯ್ಯನ್ನೂರಿನಲ್ಲಿ ಸ್ಕೂಟರ್ ಹಾಗೂ ಪಿಕ್‌ಅಪ್ ವಾಹನ ಡಿಕ್ಕಿಯಾಗಿ ತ್ರಿಕ್ಕರಿಪುರ ಸೌತ್‌ಕಕ್ಕುನ್ನಂ ನಿವಾಸಿ, ಸ್ಕೂಟರ್ ಸವಾರ ಸುಕೇಶ್(38) ಮೃತಪಟ್ಟಿದ್ದಾರೆ. ಸ್ನೇಹಿತನೊಂದಿಗೆ ಸ್ಕೂಟರಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಪಯ್ಯನ್ನೂರು ಮೀನಾಬಜಾರ್ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net