ಬೈಕ್ ಡಿಕ್ಕಿ, ಸವಾರ ಸಾವು

accedent
Published on

ಉಳ್ಳಾಲ: ನೇತ್ರಾವತಿ ನದಿ ಸೇತುವೆಯಲ್ಲಿ ಮಂಗಳವಾರ ತಡರಾತ್ರಿ ಸೇತುವೆ ಆವರಣ ಗೋಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂಲತಃ ಬಾಗಲಕೋಟೆ ನಿವಾಸಿ, ಹಲವು ವರ್ಷಗಳಿಂದ ಉಳ್ಳಾಲ ತಾಲೂಕಿನ ಕಲ್ಲಾಪು ಪಟ್ಲದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಸುರೇಶ್(32) ಮೃತಪಟ್ಟವರು. ಅವಿವಾಹಿತರಾಗಿದ್ದ ಅವರು, ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿದ್ದು ಹಿಂದೆ ಮಂಗಳೂರಿನ ಕಂಪನಿಯೊಂದರಲ್ಲಿ ವೃತ್ತಿಯಲ್ಲಿದ್ದರು. ಇತ್ತೀಚಿಗೆ ಕಾಪಿಕಾಡುವಿನಲ್ಲಿ ಸ್ವಂತ ಗ್ಯಾರೇಜ್ ತೆರೆದಿದ್ದರು ಎನ್ನಲಾಗಿದೆ. ಅವರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net