More

    ಹೈನುಗಾರಿಕೆ ಅಭಿವೃದ್ಧಿಗೆ ಪ್ರೋತ್ಸಾಹ : ಕೆ.ಪಿ.ಸುಚರಿತ ಶೆಟ್ಟಿ

    ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

    ಹೈನುಗಾರಿಕೆಗೆ ಉತ್ತೇಜನ ನೀಡುವ ಜತೆಗೆ ಸರ್ಕಾರ ಹೈನುಗಾರರಿಗೆ ಬೇರೆ ಬೇರೆ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ದ.ಕ. ಹಾಲೂ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.

    ಕಿನ್ನಿಗೋಳಿ ಸಮೀಪದ ಐಕಳದ ಬಾಕಿಮಾರು ಗದ್ದೆಯಲ್ಲಿ ಐಕಳ ಕಾಂತಾಬಾರೆ ಬೂದಬಾರೆ ಜೋಡುಕರೆ ಕಂಬಳ ಉತ್ಸವದ ಪ್ರಯುಕ್ತ ವಿವಿಧ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಜಾನುವಾರು ಮೇಳ ಹಾಗೂ ತುಳು ಜಾನಪದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

    ದ.ಕ, ಉಡುಪಿ ಜಿಲ್ಲೆಯಲ್ಲಿ ಹಾಲು ಕೊರತೆ ಇದ್ದು, ಪ್ರತೀ ದಿನ ಒಂದುವರೆ ಲಕ್ಷ ಲೀಟರ್ ಹಾಲಿನ ಕೊರತೆ ಎದುರಿಸುತ್ತಿದೆ, ಪಕ್ಕದ ಹಾಸನ, ಮಂಡ್ಯದಿಂದ ಹಾಲು ಆಮದು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಏಳಿಂಜೆ ದೇವಸ್ಥಾನದ ಅರ್ಚಕ ವೈ, ವಿ.ಗಣೇಶ್ ಭಟ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೃಷಿ ವಿಜ್ಞಾನಿ ಡಾ.ಶಿವಕುಮಾರ್, ಐಕಳ ಗ್ರಾಪಂ ಉಪಾಧ್ಯಕ್ಷ ಜಯಲಕ್ಷ್ಮೀ ಪೂಜಾರಿ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಪಟ್ಟೆ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷ ಉಷಾ ಅಶೋಕ್ ಶೆಟ್ಟಿ, ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ, ದ.ಕ. ಹಾಲು ಉತ್ಪಾದಕ ಒಕ್ಕೂಟದ ಮಹಾಪ್ರಬಂಧಕ ಡಾ.ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ವಾದಿರಾಜ ಶೆಟ್ಟಿ, ಡಾ.ವಿಶ್ವರಾಧ್ಯ ಕಂಬಳ ಸಮಿತಿ ಚಿತ್ರಂಜನ್ ಭಂಡಾರಿ, ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ದೇವಿದಾಸ್ ಶೆಟ್ಟಿ ಕಿನ್ನಿಗೋಳಿ, ಲೀಲಾಧರ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

    ನಿವೃತ್ತ ಉಪನ್ಯಾಸಕ ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು. ಬಳಿಕ ಬೃಹತ್ ಜಾನುವಾರ ಮೇಳ ಹಾಗೂ ತುಳು ಜನಪದ ಕ್ರೀಡೋತ್ಸವ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಜಾನುವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

    ಐಕಳ ಕಂಬಳ ಸಮಿತಿ ಮತ್ತು ಕೆ.ಎಂ.ಎಫ್ ವತಿಯಿಂದ ಬಾಗವಹಿಸಿದ ಜಾನುವಾರುಗಳಿಗೆ ಹಾಲಿನ ಕ್ಯಾನ್, ಮಿನರಲ್ ಮಿಕ್ಸ್ ಮತ್ತು ಪಶು ಆಹಾರ ನೀಡಲಾಗಿದ್ದು, ಪಶು ವೈದ್ಯಾಧಿಕಾರಿಗಳಿಂದ ಹೈನುಗಾರಿಕೆಯ ಬಗ್ಗೆ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು.

    ಬಹುಮಾನ ವಿಜೇತರು

    ಜರ್ಸಿ ವಿಭಾಗ: ಪ್ರಥಮ: ಸುನಂದ ಶೆಟ್ಟಿ ಕೊಲ್ಲೂರು. ದ್ವಿತೀಯ: ಲಕ್ಷೀ ಪೂಜಾರಿ ಕೊಟ್ರಪಾಡಿ. ತೃತೀಯ: ಜಲಜಾ ಶ್ರೀಧರ ಕಟೀಲು. ಎಚ್.ಎಫ್ ವಿಭಾಗ: ಪ್ರಥಮ: ನಳಿನ್ ಪಟ್ಟೆ. ದ್ವಿತೀಯ: ಪುರುಶೋತ್ತಮ ಪೂಜಾರಿ ಕಡಂದಲೆ. ತೃತೀಯ: ವಿಶ್ವನಾಥ ಶೆಟ್ಟಿ ಕುದ್ರಿಪದವು. ಕರು ವಿಭಾಗ: ಪ್ರಥಮ: ಭಾಸ್ಕರ ಶೆಟ್ಟಿ ಅಶ್ವಥಪುರ. ದ್ವಿತೀಯ: ಅಮೂಲ್ಯ ಶೆಟ್ಟಿ ಕಟೀಲು. ತೃತೀಯ: ಪ್ರಸನ್ನ ಕೆ.ಬಿ. ಶುಂಠಿಲಪದವು. ಗಡಸು ವಿಭಾಗ: ಪ್ರಥಮ: ಮಹಾಬಲ ನಾಯ್ಕ. ದ್ವಿತೀಯ: ಪುರುಶೋತ್ತಮ ಭಟ್ ಪೊಸ್ರಾಲು. ತೃತೀಯ: ಕುಮುದ ಶಂಕರ ಶೆಟ್ಟಿ ಕಟೀಲು. ದೇಶಿ ತಳಿ ವಿಭಾಗ: ಪ್ರಥಮ: ಸುಹಾಸ್ ಕರ್ನಿರೆ. ದ್ವಿತೀಯ: ಸಂಗೀತಾ ಗೌಡ ಶುಂಠಿಲಪದವು. ತೃತೀಯ: ನಾಗರಾಜ ಭಟ್ ಕರ್ನಿರೆ

    ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ತಿನಲ್ಲಿ ಜಾನುವಾರು ಮೇಳ ಆಯೋಜಿಸಿದ್ದು, ಗ್ರಾಮೀಣ ಭಾಗದ ರೈತರು ಹೈನುಗಾರರು ಇಂತಹ ಮೇಳಗಳಿಂದ ಇನ್ನಷ್ಟು ಪ್ರಯೋಜನ ಪಡೆಯುವಂತಾಗಬೇಕು.

    ಡಾ.ದೇವಿಪ್ರಸಾದ್ ಶೆಟ್ಟಿ
    ಅಧ್ಯಕ್ಷ, ಕಂಬಳ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts