ಮರಕ್ಕೆ ಮೊಪೆಡ್ ಡಿಕ್ಕಿಯಾಗಿ ಸವಾರ ಸಾವು

ಚಿಕ್ಕಹೊನ್ನೇಗೌಡ
Published on

ಗುಂಡ್ಲುಪೇಟೆ: ತಾಲೂಕಿನ ಕಗ್ಗಳ ಗ್ರಾಮದ ಸಮೀಪ ಶನಿವಾರ ಮರಕ್ಕೆ ಮೊಪೆಡ್ ಡಿಕ್ಕಿ ಹೊಡೆದು ಸವಾರ ಸಾವಿಗೀಡಾಗಿದ್ದಾರೆ.

ಗ್ರಾಮದ ಸಂಗೇಗೌಡನಹುಂಡಿ ಗ್ರಾಮದ ಚಿಕ್ಕಹೊನ್ನೇಗೌಡ (56) ಮೃತಪಟ್ಟವರು. ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿದ್ದ ಇವರು ಶನಿವಾರ ಗ್ರಾಮವೊಂದರಲ್ಲಿ ಜಾನುವಾರಿಗೆ ಕೃತಕ ಗರ್ಭಧಾರಣೆ ವ್ಯಾಕ್ಸಿನ್ ನೀಡಿ ತಮ್ಮ ಮೊಪೆಡ್‌ನಲ್ಲಿ ವಾಪಸ್ಸಾಗುವಾಗ ಕಗ್ಗಳ ಸಮೀಪ ರಸ್ತೆ ಬದಿಯಲ್ಲಿದ್ದ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು.

ಕೂಡಲೇ ಸ್ಥಳಕ್ಕೆ ತೆರಳಿದ ಹೊಯ್ಸಳ ಪೊಲೀಸರು ಚಿಕ್ಕಹೊನ್ನೇಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net