

ಮುಂಡಗೋಡ: ಕಟ್ಟಿಗೆ ತುಂಬಿ ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಮಳಗಿ ಪಂಚಾಯಿತಿ ವ್ಯಾಪ್ತಿಯ ಕಲ್ಲಹಕ್ಕಲ ಗ್ರಾಮದ ಮಹೇಶ ಬಸವಂತಪ್ಪ ಶೃಂಗೇರಿ (55) ಮೃತಪಟ್ಟ ಬೈಕ್ ಸವಾರ. ಮಳಗಿ ಗ್ರಾಮದ ಬನವಾಸಿ ರಸ್ತೆಯಲ್ಲಿ ನಿಲಗಿರಿ ಪೋಲ್ಸ್ ತುಂಬಿಕೊಂಡು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ಲಾರಿ ನಿಲ್ಲಿಸಲಾಗಿತ್ತು. ಎದುರಿನಿಂದ ಮತ್ತೊಂದು ವಾಹನ ಬಂದ ಪರಿಣಾಮ ನಿಂತಿದ್ದ ಲಾರಿ ಸರಿಯಾಗಿ ಕಾಣದೇ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.