ಶ್ರೀಮಂತ ಭಾಷೆ ಕನ್ನಡ

30LNG01
ಲಿಂಗಸುಗೂರು ಬಸ್ ನಿಲ್ದಾಣ ವೃತ್ತದಲ್ಲಿ ಕರವೇ ಕಾರ್ಯಕರ್ತರು ಕಮಲ್‌ಹಾಸನ್ ಫೋಟೋ ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಶಾ, ಪ್ರಮುಖರಾದ ರವಿಕುಮಾರ ಬರಗುಡಿ, ಅಜೀಜ್ ಪಾಶಾ, ಮೋಸಿನ್ ಖಾನ್, ವಿರೇಶ ಐದನಾಳ, ನಿಜಗುಣಾನಂದ, ಬಸವರಾಜ, ಅಲ್ಲಾಮೊಯಿನುದ್ದಿನ್, ಅಲ್ಲಭಕ್ಷಿ ಮನಿಯಾರ್, ಆದಿಲ್, ಸಲ್ಮಾನ್ ಖಾನ್, ಆರೀಫ್, ಮರಿಯಪ್ಪ ಇತರರಿದ್ದರು.
Published on

ಲಿಂಗಸುಗೂರು: ಕನ್ನಡ ಭಾಷೆಗೆ ಅವಹೇಳನ ಮಾಡಿದ ನಟ ಕಮಲ್ ಹಾಸನ್ ಅವರು ಕ್ಷಮೆಯಾಚಿಸಬೇಕು ಮತ್ತು ಅವರ ಚಲನಚಿತ್ರ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ ಅತಿಮಹತ್ವದ ಸ್ಥಾನ ಹೊಂದಿದ್ದು, ಕನ್ನಡ ಸಾಹಿತ್ಯ ಜಗತ್ತಿನ ಭಾಷಾ ಪ್ರಪಂಚದಲ್ಲಿ ಅತಿ ಶ್ರೀಮಂತ ಭಾಷೆಯಾಗಿದೆ. ಆದಿಕವಿ ಪಂಪ, ರನ್ನ, ಬಸವಾದಿ ಶಿವಶರಣರು, ಸರ್ವಜ್ಞ, ಪುರಂದರ ದಾಸರು, ಕನಕದಾಸರು, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ಕುವೆಂಪು, ಡಿ.ಎಸ್.ಕರ್ಕಿ, ಚನ್ನವೀರ ಕಣವಿ, ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ದ.ರಾ.ಬೇಂದ್ರೆ, ಶಿವರಾಮ ಕಾರಂತ ಸೇರಿ ಅನೇಕ ಕವಿಗಳು, ಸಾಹಿತಿಗಳು, ದಾಸರು, ಶರಣರು ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ.

ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಲಭಿಸಿದೆ. ಇಂತಹ ಶ್ರೀಮಂತ ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಭಾಷೆ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ ಕ್ರಮವಾಗಿದೆ. ನಟ ಕಮಲ್ ಹಾಸನ್ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಸರ್ಕಾರ ಮತ್ತು ಚಲನಚಿತ್ರ ಮಂಡಳಿ ಕಮಲ್ ಹಾಸನ್ ಅವರ ತಂಗ್ ಲೈಫ್ ಚಿತ್ರ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಶಾ, ಪ್ರಮುಖರಾದ ರವಿಕುಮಾರ ಬರಗುಡಿ, ಅಜೀಜ್ ಪಾಶಾ, ಮೋಸಿನ್ ಖಾನ್, ವಿರೇಶ ಐದನಾಳ, ನಿಜಗುಣಾನಂದ, ಬಸವರಾಜ, ಅಲ್ಲಾಮೊಯಿನುದ್ದಿನ್, ಅಲ್ಲಭಕ್ಷಿ ಮನಿಯಾರ್, ಆದಿಲ್, ಸಲ್ಮಾನ್ ಖಾನ್, ಆರೀಫ್, ಮರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net