

ಬೆಂಗಳೂರು: ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅನರ್ಹಗೊಂಡಿದ್ದ ಕಾರ್ಡ್ಗಳ ಮರುಸ್ಥಾಪನೆ ಪ್ರಕ್ರಿಯೆ ಆರಂಭವಾಗಿದೆ. ಮೂರ್ನಾಲ್ಕು ದಿನದಲ್ಲಿ ರದ್ದಾಗಿದ್ದ 22ಲಕ್ಷಕ್ಕೂ ಅಧಿಕ ಕಾರ್ಡ್ಗಳ ಪೈಕಿ 2.95 ಲಕ್ಷ ಕಾರ್ಡ್ಗಳನ್ನು ಬಿಪಿಎಲ್ಗೆ ಮರುಸ್ಥಾಪಿಸಲಾಗಿದೆ.
ಆಹಾರ ಇಲಾಖೆಯಿಂದ ರದ್ದಾದ ಕಾರ್ಡ್ಗಳ ಮರುಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ ಕಾರ್ಡ್ಗಳ ಮರುಸ್ಥಾಪನೆ ಕಾರ್ಯ ನಡೆಯಲಿದೆ. ಗುರುವಾರ (ಡಿ.28) ಕಾರ್ಡ್ಗಳ ಮರುಪರಿಶೀಲನೆ ಕಾರ್ಯಕ್ಕೆ ಕೊನೆಯ ದಿನವಾಗಿದೆ. ಆಧಾರ್, ಪ್ಯಾನ್, ಐಟಿ ರಶೀದಿ ಸೇರಿ ಇತರೆ ದಾಖಲೆಗಳ ಮೂಲಕ ಕಾರ್ಡ್ಗಳ ಸರಿಪಡಿಸಿಕೊಳ್ಳಲು ಸರ್ಕಾರ ಅವಕಾಶ ಕೊಟ್ಟಿದೆ. ಪಡಿತರ ಎನ್ಐಸಿ ತಂತ್ರಾಂಶ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿರುವ ಇಲಾಖೆ, ಕಾರ್ಡ್ಗಳ ಮರು ಪರಿಶೀಲನೆ ಎದುರಾಗಿದ್ದ ತಾಂತ್ರಿಕ ಸಮಸ್ಯೆ ಬಗೆಹರಿಸಿದೆ. ಮುಂದಿನ ತಿಂಗಳಿಂದ ರದ್ದಾದ ಕಾರ್ಡ್ಗಳಿಗೆ ಪಡಿತರ ನೀಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಅಮಾನತಿನಲ್ಲಿಟ್ಟಿರುವ ಪಡಿತರ ಚೀಟಿಗಳ ಮರುಸ್ಥಾಪನೆಗೆ ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್ನಲ್ಲಿ ಅವಕಾಶ ನೀಡಲಾಗಿದೆ. ರಾಜ್ಯದ ವಿವಿಧೆಡೆ ಇಲಾಖೆ ಕಚೇರಿಗಳಲ್ಲಿ ಕಾರ್ಡ್ಗಳ ಮರುಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಇದರಿಂದಾಗಿ ಲಕ್ಷಾಂತರ ಲಾನುಭವಿಗಳು ಕಾರ್ಡ್ಗಳ ರದ್ದತಿ ತೂಗುಗತ್ತಿಯಿಂದ ಪಾರಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 22,62,413 ಅನರ್ಹ ಬಿಪಿಎಲ್,ಅಂತ್ಯೋದಯ ಕಾರ್ಡ್ಗಳು ಇರುವುದನ್ನು ಕುಟುಂಬ ತಂತ್ರಾಂಶದಿಂದ ಇಲಾಖೆ ಪತ್ತೆ ಹಚ್ಚಿತ್ತು. ಅನರ್ಹ ಪಡಿತರ ಚೀಟಿಗಳ ಮಾಹಿತಿ ನೀಡುವಂತೆ ಇಲಾಖೆ, ಇ&ಆಡಳಿತ ಕೇಂದ್ರಕ್ಕೆ ಕೋರಿತ್ತು.
10,97,621 ಅನರ್ಹ ಬಿಪಿಎಲ್, ಅಂತ್ಯೋದಯ, 1,06,152 ಚೀಟಿಗಳು ಆದಾಯ ತೆರಿಗೆ ಪಾವತಿದಾರರು, 10,54,368 ಕಾರ್ಡ್ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹಾಗೂ 4,272 ಚೀಟಿ ಕೆಜಿಐಡಿ,ಎಚ್ಆರ್ಎಂಎಸ್ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ&ಆಡಳಿತ ಕೇಂದ್ರ ಪತ್ತೆ ಹಚ್ಚಿತ್ತು.ಈ ವೇಳೆ ಕೆಲ ಕಾರ್ಡ್ಗಳನ್ನು ಬಿಪಿಎಲ್ನಿಂದ ಎಪಿಎಲ್ ಪರಿವರ್ತಿಸಲಾಗಿತ್ತು. ಉಳಿದ ಅನರ್ಹ ಕಾರ್ಡ್ಗಳನ್ನು ರದ್ದುಪಡಿಸಲಾಗಿತ್ತು. ಆದರೆ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಕಾರ್ಡ್ಗಳನ್ನು ಮರುಸ್ಥಾಪನೆಗೆ ಸರ್ಕಾರ, ಇಲಾಖೆ ಅನುಮೋದನೆ ಕೊಟ್ಟಿತ್ತು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್ಗಳಿವೆ. ಹಾಗಾಗಿ,ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರ, ಮನೆಯಲ್ಲಿ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವವರು, ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು, ಅನುದಾನಿತ/ಅನುದಾನರಹಿತ ಶಾಲಾ ಕಾಲೇಜು ನೌಕರರು, ನೊಂದಾಯಿತ ಗುತ್ತಿಗೆದಾರರು, ಬಹುರಾಷ್ಟ್ರೀಯ ಕಂಪನಿ,ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಸ್ವಂತಕ್ಕಾಗಿ ಒಂದು ಆಟೋರೀಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ಕಾರು ಹೊಂದಿರುವ ಸೇರಿ 14 ಮಾನದಂಡ ಮುಂದಿಟ್ಟುಕೊಂಡು ಬಿಪಿಎಲ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿತ್ತು.
ಜಿಲ್ಲಾವಾರು ಅನರ್ಹ ಕಾರ್ಡ್ಗಳ ವಿವರ: ಬೆಂಗಳೂರು 2,54,286, ಕಲಬುರಗಿ 1,57,540,ಮೈಸೂರು 1,41,848, ಬೀದರ್ 1,30,440, ಬೆಳಗಾವಿ 1,27,840, ಕೋಲಾರ 1,25,621, ದಣ ಕನ್ನಡ 1,11,346, ಶಿವಮೊಗ್ಗ 1,08,770, ಚಿಕ್ಕಮಗಳೂರು 1,05,768, ದಾವಣಗೆರೆ 85,102, ಉಡುಪಿ 80,783, ಬಾಗಲಕೋಟೆ 74,015, ವಿಜಯಪುರ 62,443, ರಾಯಚೂರು 59,612, ಹಾಸನ 58,744, ಧಾರವಾಡ 55,961, ಮಂಡ್ಯ 51,806, ತುಮಕೂರು 51,069, ಬೆಂ.ಗ್ರಾಮಾಂತರ 50,670, ಹಾವೇರಿ 49,283, ಉತ್ತರ ಕನ್ನಡ 49,129, ಚಿತ್ರದುರ್ಗ 43,834, ಕೊಡಗು 32,318, ಬಳ್ಳಾರಿ 31,151, ಗದಗ 29,738, ರಾಮನಗರ 26,305, ವಿಜಯನಗರ 25,701, ಚಾಮರಾಜನಗರ 20,042,ಯಾದಗಿರಿ 19,459, ಕೊಪ್ಪಳ 19,271, ಚಿಕ್ಕಬಳ್ಳಾಪುರ 18,518.