ಅಮೃತ ಭಾರತಿಯಲ್ಲಿ ಪುನಶ್ಚೇತನ ಕಾರ್ಯಕ್ರಮ

hbr (3)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಮಾತನಾಡಿ, ಮೈತುಂಬ ಬಟ್ಟೆ ಧರಿಸುವುದು ನಮ್ಮ ಸಂಸ್ಕೃತಿ, ಗಂಡಿನ ಹಣೆಯಲ್ಲಿ ತಿಲಕ, ಹೆಣ್ಣಿನ ಹಣೆಯಲ್ಲಿ ಕುಂಕುಮ ಕೈಯಲ್ಲಿ ಬಳೆ ನಮ್ಮ ಸಂಸ್ಕೃತಿಯ ಬಳುವಳಿ. ಮನೆಯ ಮುಂದೆ ರಂಗೋಲಿ ಹಾಕುವುದು, ಹೊಸ್ತಿಲು ಪೂಜೆ, ಅಶ್ವತ್ಥ ಪೂಜೆ ಇತ್ಯಾದಿಗಳು ನಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಸ್ಮರಣಿಕೆ ನೀಡಿ ಗೌರವಿಸಿದರು. ಅಮೃತ ಭಾರತಿ ಟ್ರಸ್ಟ್‌ನ ಸದಸ್ಯರಾದ ವಿಷ್ಣುಮೂರ್ತಿ ನಾಯಕ್ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net