ಮಕ್ಕಳ ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಉತ್ತಮ ತಾಣ

byn (2)
Published on

ಬೈಂದೂರು: ಅಂಗನವಾಡಿ ಕೇಂದ್ರಗಳು ಮಕ್ಕಳ ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಒಂದು ಉತ್ತಮ ತಾಣ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಉಪ್ಪುಂದ ಗ್ರಾಮ ರಥಬೀದಿಯಲ್ಲಿ ನಿರ್ವಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ವಾತನಾಡಿದರು. ಆಂಗ್ಲ ಭಾಷೆ ವ್ಯಾಮೋಹ, ಪಾಶ್ಚಿವಾತ್ಯ ಸಂಸ್ಕೃತಿ ಅಂಧಾನುಕರಣೆ, ಹಣ ದೋಚುವ ಶಿಶುಪಾಲನಾ ಕೇಂದ್ರಗಳು ಎಲ್ಲೆಡೆ ತಲೆಎತ್ತುತ್ತಿವೆ. ಅವುಗಳು ದಿನದ ಒಂದಷ್ಟು ಹೊತ್ತು ಮಕ್ಕಳ ಲಾಲನೆ ಪಾಲನೆ ಪಾಲಕರಲ್ಲಿ ಭರವಸೆ ನೀಡಬಹುದೇ ಹೊರತು ಸಂಸ್ಕೃತಿ, ಶಿಷ್ಟಾಚಾರದ ಅರಿವು ನೀಡುವ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಸಂಸ್ಕಾರ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಿಂದ ಮಾತ್ರ ನಿರೀಕ್ಷಿಸಬಹುದು ಎಂದರು. ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಸತೀಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ನಾಗರಾಜ ಶೇಟ್, ಪ್ರೇವಾ ದೇವಾಡಿಗ, ದಿವಾಕರ ಶೆಟ್ಟಿ, ಜಗನ್ನಾಥ ಉಪ್ಪುಂದ, ಜಿಪಂ ವಾಜಿ ಸದಸ್ಯೆ ಗೌರಿ ದೇವಾಡಿಗ, ಪಿಡಿಒ ಸುದರ್ಶನ್ ಎಸ್., ಇಲಾಖೆ ವಲಯ ಮೇಲ್ವಿಚಾರಕಿ ರೇವತಿ, ಅಂಗನವಾಡಿ ಸಮಿತಿ ಅಧ್ಯಕ್ಷೆ ಪ್ರತಿವಾ ದೇವಾಡಿಗ, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ, ಆರೋಗ್ಯ ಕಾರ್ಯಕರ್ತೆ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಗುಣ ಸ್ವಾಗತಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ಪುಸ್ತಕ ವಿತರಣೆ

ಅಂಗನವಾಡಿ ಕೇಂದ್ರ ಸ್ಥಾಪನೆಗೆ ಕಾರಣಕರ್ತರಾದ ದಿ.ಚಂದು ಗಾಣಿಗ ಅವರ ಪರವಾಗಿ ಅವರ ಪುತ್ರ ರಾಧಾಕೃಷ್ಣ ಗಾಣಿಗ, ಶ್ರೀ ದುರ್ಗಾ ಫ್ರೆಂಡ್ಸ್‌ನ ಅಧ್ಯಕ್ಷ ಮಂಜುನಾಥ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆ ಸುಗುಣ ಹಾಗೂ ಸಹಾಯಕಿ ಭಾರತಿ ಇವರನ್ನು ಸನ್ಮಾನಿಸಲಾಯಿತು. ರಥಬೀದಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶ್ರೀ ದುರ್ಗಾ ಫ್ರೆಂಡ್ಸ್ ಸಂಸ್ಥೆ ನೀಡಿದ ಪುಸ್ತಕವನ್ನು ಶಾಸಕರು ವಿತರಿಸಿದರು. ಸ್ಪರ್ಧಾ ವಿಜೇತರಿಗೆ ಬಹುವಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net