ತುಮಕೂರು ಜಿಲ್ಲಾಧಿಕಾರಿ ವಿರುದ್ಧ ತನಿಖೆಗೆ ಕೃಷ್ಣಬೈರೇಗೌಡ ಆದೇಶ

RM
Published on

ಪ್ರಾದೇಶಿಕ ಆಯುಕ್ತರಿಗೆ ತನಿಖೆ ಜವಾಬ್ದಾರಿ *ವಿಧಾನಸೌಧದಲ್ಲಿಯೂ ಡಿಜಿಟಲ್​ ಸಹಿ ಸದ್ದು*

ಬೆಂಗಳೂರು: ಕೃಷಿಗೆ ಯೋಗ್ಯವಲ್ಲದ ಪಡಾ ಬಿದ್ದ 40 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ನೀಡಿ, ಕೈಗಾರಿಕಾ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಟ್ಟಿರುವ ತುಮಕೂರು ಜಿಲ್ಲಾಧಿಕಾರಿ ವಿರುದ್ಧ ತನಿಖೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಆದೇಶಿಸಿದ್ದು, ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಿಗೆ ತನಿಖೆ ನಡೆಸಿ ಶ್ರೀ ವರದಿ ನೀಡಲು ಸೂಚಿಸಲಾಗಿದೆ.

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ತುಮಕೂರು ಜಿಲ್ಲಾಧಿಕಾರಿ ಡಿಜಿಟಲ್​ ಸಹಿ ದುರುಪಯೋಗ ಹಾಗೂ ಅಕ್ರಮವಾಗಿ ದಾಖಲಾತಿ ಸೃಷ್ಠಿಸಿಕೊಂಡ 40 ಎಕರೆ ಸರ್ಕಾರಿ ಪಡಾ ಭೂಮಿ ಲಪಟಾಯಿಸಿದ್ದವರಿಗೆ ಭೂಪರಿವರ್ತನೆ ಮಾಡಿಕೊಟ್ಟಿರುವ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವಿಡಿಯೋ ಸಂವಾದದ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಇಲಾಖೆಯ ಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ್ದ ಸಚಿವರು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಡಿಜಿಟಲ್​ ಸಹಿ ದುರುಪಯೋಗ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ತನಿಖೆ ನಡೆಸಿ, ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದೆ ಎಂದರು,

ತುಮಕೂರು, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ಅನೇಕ ಜಿಲ್ಲೆಗಳಲ್ಲಿ ಹೊಸ ಕಂದಾಯ ಗ್ರಾಮಗಳನ್ನು ಗುರುತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಡಿ.31ರೊಳಗೆ ರಾಜ್ಯದೆಲ್ಲೆಡೆಯೂ ಎಲ್ಲ ಕಂದಾಯ ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಆಗಲೇಬೇಕು ಎಂದು ಕಟ್ಟಪ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net