

ಕೊಕ್ಕರ್ಣೆ: ಕರ್ನಾಟಕ ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ ಬ್ರಹ್ಮಾವರ ವಲಯ ಘಟಕ ವತಿಯಿಂದ ನಡೆದ ಮುಖ್ಯ ಶಿಕ್ಷಕರ ಸಮ್ಮಿಲನ ಮತ್ತು ನಿವೃತ್ತ ಮುಖ್ಯಶಿಕ್ಷಕರ ಸನ್ಮಾನ ಕಾರ್ಯಕ್ರಮ ಬಿ.ಆರ್.ಸಿ. ಬ್ರಹ್ಮಾವರ ವಲಯ ಅಧ್ಯಕ್ಷ ಸಾಧು ಶೇರಿಗಾರ್ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಬಮಾ ಅಂಜುಮ್ ನಿವೃತ್ತ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿದರು. ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಬ್ರಹ್ಮಾವರ ವಲಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರದ ಸಮನ್ವಯಾಧಿಕಾರಿ ಸುರೇಶ್ ಕುಂದರ್, ಬ್ರಹ್ಮಾವರ ವಲಯ ಇಸಿಒ ನಾಗರಾಜ ಭಟ್, ಪ್ರಕಾಶ್ ಬಿ.ಬಿ., ನಾಗಾರ್ಜುನ, ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕರಾದ ದೇವಕುಮಾರಿ, ಪ್ರೇಮಾವತಿ ಶೆಟ್ಟಿ, ಮಾಧವ ಹಾಗೂ ಸುನೀಲ್ ಅವರನ್ನು ಸನ್ಮಾನಿಸಲಾಯಿತು. ಕೋಶಾಧಿಕಾರಿ ಜಾನಕಿ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಘವೇಂದ್ರ ಎಚ್. ಸ್ವಾಗತಿಸಿದರು. ಕುಕ್ಕೆಹಳ್ಳಿ ಸರಸ್ವತಿ ನಿರೂಪಿಸಿದರು. ಸಹಕಾರ್ಯದರ್ಶಿ ಗೋಪಾಲ ನಾಯ್ಕ ವಂದಿಸಿದರು. ಬಿಆರ್‌ಪಿಗಳಾದ ಉದಯ ಕೋಟ, ಸುರೇಶ ನಾಯ್ಕ, ಸಿಆರ್‌ಪಿ ಚಂದ್ರಶೇಖರ, ನಿವೃತ್ತ ಮುಖ್ಯ ಶಿಕ್ಷಕ ಸುಧಾರಕ್ ಎನ್., ಸಂಘದ ಪದಾಧಿಕಾರಿಗಳು ಮತ್ತು ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.