

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಕೆರ್ವಾಶೆ, ಶಿರ್ಲಾಲು, ಮುಂಡ್ಲಿ ಪರಿಸರ ಸಂಪರ್ಕಿಸುವ ಪ್ರಮುಖ ಮುಂಡ್ಲಿ ಸೇತುವೆ ಶಿಥಿಲ ವ್ಯವಸ್ಥೆಗೆ ತಲುಪಿ ವರ್ಷ ಸಂದರೂ ಇಂದಿಗೂ ನೂತನ ಸೇತುವೆ ನಿರ್ಮಾಣ ಬಗ್ಗೆ ಆಲೋಚನೆ ನಡೆದಿಲ್ಲ ಎನ್ನುವ ಕೂಗು ಗ್ರಾಮದ ಜನತೆಯಲ್ಲಿದೆ.
ತಾಲೂಕಿನ ಮುಂಡ್ಲಿ ಪರಿಸರದಲ್ಲಿ ಹರಿಯುವ ಸ್ವರ್ಣ ನದಿಗೆ ಅಡ್ಡಲಾಗಿ ವರ್ಷಗಳ ಹಿಂದೆ ಕಟ್ಟಲಾದ ಮುಂಡ್ಲಿ ಸೇತುವೆ ಯಾವಾಗ ಬೀಳುತ್ತದೋ ಎನ್ನುವ ಭೀತಿ ಇದೆ. ನಿತ್ಯ ಇದೇ ಸೇತುವೆ ದಾಟಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮುಖ್ಯ ಪಟ್ಟಣ ಪ್ರದೇಶ ಸೇರುತ್ತಿದ್ದು ಇರುವ ಒಂದು ಸಂಪರ್ಕ ಕಡಿತಗೊಂಡು ಮೂರು ನಾಲ್ಕು ಗ್ರಾಮದ ಜನತೆ ಸಂಕಟ ಅನುಭವಿಸುವುದರ ಜತೆಗೆ ಸುಮಾರು 10-15 ಕಿ.ಮೀ ಸುತ್ತು ಬಳಸಿ ಪೇಟೆ ಪರಿಸರ ಸಂಪರ್ಕಿಸುವ ಅನಿವಾರ್ಯತೆ ಇದೆ.
ಸೇತುವೆ ಬಿರುಕು ಬಿಟ್ಟು ವರ್ಷ ಕಳೆದರೂ ಪ್ರತಿ ಬಾರಿ ಸೇತುವೆ ಮೇಲ್ಭಾಗದಲ್ಲಿ ನಿರ್ಮಾಣವಾಗುವ ಹೊಂಡಕ್ಕೆ ತೇಪೆ ಹಾಕುವುದು ಬಿಟ್ಟರೆ ನೂತನ ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಈಗಾಗಲೇ ಸೇತುವೆ ಬಹುಪಾಲು ಶಿಥಿಲಗೊಂಡು, ಸೇತುವೆ ಮೇಲ್ಭಾಗದ ತಡೆಗೋಡೆ ಅಲ್ಲಲ್ಲಿ ಕುಸಿದಿದೆ. ಅಲ್ಲದೆ ತಲಭಾಗದಲ್ಲಿ ಸೇತುವೆ ಪಿಲ್ಲರ್ ಕಲ್ಲುಗಳು ಜರಿದು ಬಿದ್ದು ಬಿರುಕು ಉಂಟಾಗಿದೆ. ಸಿಮೆಂಟ್ ಸ್ಲಾೃಬ್ ಕಿತ್ತುಹೋಗಿ ಕಬ್ಬಿಣದ ರಾಡು ಗೋಚರಿಸುತ್ತಿದೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಸೇತುವೆಯಲ್ಲೇ ನಿತ್ಯ ವಾಹನ ಓಡಾಡುವುದು ಅನಿವಾರ್ಯ.
ಪರಿಸರದ ಮೂರ್ನಾಲ್ಕು ಗ್ರಾಮಕ್ಕೆ ಪ್ರಮುಖ ಸಂಪರ್ಕ ಕೊಂಡಿ. ಇದೇ ಸೇತುವೆ ದಾಟಿ ನಿತ್ಯ ನೂರಾರು ಜನರು ಕೆಲಸಕ್ಕೆ ತೆರಳುತ್ತಾರೆ. ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಹೊತ್ತು ತರುವ ಬಸ್, ಕಾರು, ರಿಕ್ಷಾಗಳು ಕೂಡ ಇದೇ ಸೇತುವೆಯಲ್ಲಿ ನಿತ್ಯ ಓಡಾಡುತ್ತದೆ. ಅಲ್ಲದೆ ಭಾರಿ ವಾಹನಗಳು ಕೂಡ ಟನ್ಗಟ್ಟಲೇ ಲೋಡು ತುಂಬಿಕೊಂಡು ಸೇತುವೆಯಲ್ಲಿ ಓಡಾಡುತ್ತಿದ್ದು ಇಡೀ ಸೇತುವೆಯೇ ಅಲುಗಾಡುತ್ತದೆ. ಹೀಗಾಗಿ ಬಿರುಕುಬಿಟ್ಟ ಸೇತುವೆಯಲ್ಲಿ ಓಡಾಡುವ ಭಾರಿ ವಾಹನಗಳಿಗಾದರೂ ಬ್ರೇಕ್ ಹಾಕಬೇಕಾಗಿದೆ. ಇಲ್ಲವಾದಲ್ಲಿ ಕೆಲವೇ ಸಮಯದಲ್ಲಿ ಇಲ್ಲಿನ ಸೇತುವೆ ಧರೆಗೆ ಉರುಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದು ಗ್ರಾಮಸ್ಥರ ಬೇಸರ.
ಸೇತುವೆ ದಾಟುವಾಗ ಜೀವ ಕೈಯಲ್ಲಿ ಹಿಡಿದಿಟ್ಟುಕೊಂಡು ಹೋಗುವಂತಾಗಿದೆ. ವಾಹನಗಳು ಓಡಾಡುವ ಸಂದರ್ಭ ಸೇತುವೆ ಅಲುಗಾಡಿ ಯಾವುದೋ ತೂಗು ಸೇತುವೆಯಲ್ಲಿ ಓಡಾಡುವಂತೆ ಅನುಭವವಾಗುತ್ತದೆ. ಹೀಗಾಗಿ ಭಯದಲ್ಲೇ ಈ ಭಾಗದ ಗ್ರಾಮಸ್ಥರು ಅತ್ತಿತ್ತ ಸಾಗುವಂತಾಗಿದೆ. ಸೇತುವೆ ಶಿಥಿಲಗೊಂಡು ವರ್ಷ ಕಳೆದಿದೆ. ಈಗಾಗಲೇ ಹಲವು ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಪ್ರತಿ ಭಾರಿ ಸೇತುವೆ ಮೇಲ್ಭಾಗದಲ್ಲಿ ಹೊಂಡ ಮುಚ್ಚುವುದು ಬಿಟ್ಟರೆ ಸೇತುವೆ ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಕೈಗೊಂಡತ್ತಿಲ್ಲ. -ಕಿಶೋರ್ ಕುಮಾರ್ ಗ್ರಾಮಸ್ಥರು ಬಸ್, ಲಾರಿ, ಕಾರು ಓಡಾಡುವ ಸಂದರ್ಭದ ಇಡೀ ಸೇತುವೆ ಅಲುಗಾಡುತ್ತದೆ. ಹೀಗಾಗಿ ಸೇತುವೆಯಲ್ಲಿ ಓಡಾಡುವುದಕ್ಕೆ ಭಯವಾಗುತ್ತದೆ. ತಳಭಾಗದಲ್ಲಿ ಸಂಪೂರ್ಣ ಬಿರುಕು ಬಿಟ್ಟಿದೆ. ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯವೂ ಕಾಡುತ್ತಿದೆ. -ಮುಕೇಶ್ ವಾಹನ ಸವಾರ ನಾವು ನಿತ್ಯ ಇದೇ ಸೇತುವೆ ದಾಟಿಕೊಂಡು ಕಾಲೇಜಿಗೆ ತೆರಳುತ್ತೇವೆ. ಒಂದು ವೇಳೆ ಸೇತುವೆ ಕುಸಿದರೆ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯವಿದೆ. ಹೀಗಾಗಿ ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳು, ಸರ್ಕಾರ ಗಮನಹರಿಸಬೇಕಾಗಿದೆ. -ಅನುಷಾ ವಿದ್ಯಾರ್ಥಿನಿ https://www.vijayavani.net/sri-ram-navami-celebrations-at-kodi-temple https://www.vijayavani.net/the-town-is-prosperous-due-to-the-development-of-the-temple