ಕಳಪೆ ದರ್ಜೆಯ ಮೇವು ವಾಪಸ್

22-GPT-6
Published on

ಗುಂಡ್ಲುಪೇಟೆ: ಬರಪೀಡಿತ ತಾಲೂಕಿನ ಜಾನುವಾರುಗಳಿಗೆ ಸಬ್ಸಿಡಿ ದರದಲ್ಲಿ ಪೂರೈಸಲು ಜಿಲ್ಲಾಡಳಿತ ಖರೀದಿಸಿದ್ದ ಮೇವು ಕಳಪೆ ದರ್ಜೆಯಾಗಿದ್ದರಿಂದ ಪಶುಪಾಲನಾ ಇಲಾಖೆ ವಾಪಸ್ ಕಳುಹಿಸಿದೆ.


ತಾಲೂಕಿನ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಮೇವು ಪೂರೈಸಲು ಪಟ್ಟಣ ಹಾಗೂ ತೆರಕಣಾಂಬಿ ಎಪಿಎಂಸಿ ಮಾರುಕಟ್ಟೆಯಲ್ಲಿ ಗೋದಾಮುಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗುತ್ತಿದೆ. ಆಸಕ್ತ ರೈತರಿಗೆ ಜಾನುವಾರುಗಳ ಸಂಖ್ಯೆಗನುಗುಣವಾಗಿ ಕೆ.ಜಿ.ಗೆ 2 ರೂ.ನಂತೆ ಮೇವು ಮಾರಾಟ ಮಾಡಲಾಗುತ್ತದೆ.


ಸದ್ಯ ಪಟ್ಟಣದ ಮೇವು ಬ್ಯಾಂಕ್ ತೆರೆಯುವ ಸಲುವಾಗಿ ಸೋಮವಾರ ತರಿಸಿದ್ದ ಹುಲ್ಲಿನ ಪಿಂಡಿಗಳು ಕಳಪೆಯಾಗಿದ್ದರಿಂದ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಗೆ ತರಲಾಗಿದ್ದ ಎಲ್ಲ ಹುಲ್ಲಿನ ಪಿಂಡಿಗಳನ್ನು ವಾಪಸ್ ಕಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net