

ಕೋಟ: ಯಡ್ತಾಡಿ ಶ್ರೀ ವಿನಾಯಕ ಯುವಕ ಮಂಡಲ ಸಾಹೇಬಕಟ್ಟೆ ಆಶ್ರಯದಲ್ಲಿ 14ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-2025(ಭಕ್ತಿ ಬಣ್ಣದ ಸಂಭ್ರಮ) ನಡೆಯಿತು. ಮಹಾತ್ಮ ಗಾಂಧಿ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎಂ.ವೀರಣ್ಣ ಶೆಟ್ಟಿ ಅವರಿಗೆ 2025ನೇ ಸಾಲಿನ ಶ್ರೀ ವಿನಾಯಕ ಸಾಧನಶ್ರೀ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಾಂಸ್ಕೃತಿಕ ಚಿಂತಕ ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿದರು. ಶ್ರೀ ವಿನಾಯಕ ಯುವಕ ಮಂಡಲ ಅಧ್ಯಕ್ಷ ಅಕ್ಷಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕಿ ಗೀತಾ ಎ.ಶೆಟ್ಟಿ, ಮಾಧ್ಯಮ ಕ್ಷೇತ್ರ ರಂಜಿತ್ ಶಿರಿಯಾರ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಶಾಖಾಧಿಕಾರಿ ಮತ್ತು ಸಿಬ್ಬಂದಿ ವರ್ಗ, ಮೆಸ್ಕಾಂ ಶಿರಿಯಾರ ವಲಯದವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಗಣೇಶ ಪ್ರಸಾದ ಕಾಂಚನ್ ಶಿರಿಯಾರ, ಯು.ಪ್ರಸಾದ ಭಟ್, ಶರತ್‌ಕುಮಾರ್ ಶೆಟ್ಟಿ, ಸಂದೀಪ ಶೆಟ್ಟಿ, ಜೈ ಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಅಶೋಕ ಪ್ರಭು ಸಾಹೇಬಕಟ್ಟೆ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಪ್ರದೀಪ ಬಲ್ಲಾಳ್, ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿ, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ ಶೆಟ್ಟಿ, ವಕೀಲ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಯುವಕ ಮಂಡಲ ಕಾರ್ಯದರ್ಶಿ ಕಾರ್ತಿಕ್ ಉಪಸ್ಥಿತರಿದ್ದರು. ಯುವಕ ಮಂಡಲ ಸದಸ್ಯ ಅಜಿತ್ ಸ್ವಾಗತಿಸಿದರು. ರಾಘವೇಂದ್ರ ಹೆಸ್ಕುತ್ತೂರು ಕಾರ್ಯಕ್ರಮ ನಿರೂಪಿಸಿದರು.