ನಿವೃತ್ತ ಕಂಮಾಂಡೆಂಟ್‌ ಮನೋಜ ಬಾಡಕರ್‌ಗೆ ತವರಿನಲ್ಲಿ ಅಭಿಮಾನದ ಸ್ವಾಗತ

Manoj Badkara
Published on

ಕಾರವಾರ: ಭಾರತೀಯ ತಟರಕ್ಷಕದಳದ ಪಶ್ಚಿಮ ವಲಯದ ಕಮಾಂಡರ್ ಆಗಿ ಶನಿವಾರ ನಿವೃತ್ತರಾದ ಐಜಿ ಮನೋಜ ಬಾಡಕರ್ ಅವರಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿತು.
ಭಾನುವಾರ ಕಾರವಾರಕ್ಕೆ ಆಗಮಿಸುತ್ತಿದ್ದಂತೆ ಗೋವಾ ಗಡಿಯಲ್ಲೇ ಅವರಿಗೆ ಆರತಿ ಎತ್ತಿ ಸನ್ಮಾನಿಸಲಾಯಿತು. ನಂತರ ಮನೋಜ ಬಾಡಕರ್ ಅಭಿಮಾನಿ ಸಂಘದಿಂದ ಕಾರವಾರ ಕೋಡಿಬಾಗದಿಂದ ತೆರೆದ ವಾಹನದಲ್ಲಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಮಾಲಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿದ್ದಾರೆ 31 ಶತಾಯುಷಿಗಳು
ನಂತರ ದೈವಜ್ಞ ಕಲ್ಯಾಣ ಮಂಟದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಜ ಬಾಡಕರ್, 37 ವರ್ಷ ದೇಶ ಸೇವೆ ಮಾಡಿದ್ದೇನೆ. ಇನ್ನು ತವರಿನಲ್ಲೇ ಇದ್ದು ಸಮಾಜ ಸೇವೆ ಮುಂದುವರಿಸಲಿದ್ದೇನೆ ಎಂದರು. ಶಾಸಕ ಸತೀಶ ಸೈಲ್, ಮಾಜಿ ಶಾಸಕ ಗಂಗಾಧರ ಭಟ್ ಹಾಗೂ ಮನೋಜ ಬಾಡಕರ್ ಅವರ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net