

ಅಂಕೋಲಾ: ನಿವೃತ್ತ ಎಎಸ್ಐಯೊಬ್ಬನಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರವಾರದ ಖಾಸಗಿ ವೈದ್ಯರೊಬ್ಬರ ಬಳಿ ತಪಾಸಣೆಗೆ ತೆರಳಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಕುಮಟಾ ತಾಲೂಕಿನ ಬಂಕಿಕೊಡ್ಲ ನಿವಾಸಿ ಕೃಷ್ಣ ಚಂದ್ರು ಗೌಡ (60) ಮೃತಪಟ್ಟವರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎರಡೂವರೆ ವರ್ಷ ಕರ್ತವ್ಯ ನಿರ್ವಹಿಸಿ, ಮೇ 31ರಂದು ನಿವೃತ್ತಿ ಹೊಂದಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.