ಕಲಬುರಗಿ: ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮಾಸಿಕ ಸಭೆ ಭಾನುವಾರ ಬೆಳಗ್ಗೆ ೧೦.೩೦ಕ್ಕೆ ಸಂಘದ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ನೀಲಕಂಠರಾವ್ ಉಡಗಿ ತಿಳಿಸಿದ್ದಾರೆ. ಸಂಘದ ಅಧ್ಯಕ್ಷ ವೀರಣ್ಣ ಹೊನ್ನಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆರೋಗ್ಯ ಭಾಗ್ಯ ಯೋಜನೆ ಫಲಾನುಭವಿಗಳು ವಿಮೆ ನವೀಕರಿಸುವುದು, ಸದಸ್ಯತ್ವ ಹೊಂದುವುದು, ಕಟ್ಟಡದ ದೇಣಿಗೆ ಸಂಗ್ರಹ, ಕಟ್ಟಡದ ಬಾಕಿ ಕಾಮಗಾರಿ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲು ಈ ಸಭೆ ಕರೆಯಲಾಗಿದೆ. ಸದಸ್ಯರು ಸಭೆಗೆ ಹಾಜರಾಗಬೇಕು ಎಂದು ಕೋರಿದ್ದಾರೆ.