ಜೀರ್ಣೋದ್ಧಾರದಿಂದ ಸಾನ್ನಿಧ್ಯ ವೃದ್ಧಿ: ಮಾಣಿಲ ಸ್ವಾಮೀಜಿ ಆಶೀರ್ವಚನ

New Project (14)
Published on

ಕಡಬ: ಶಿಥಿಲಾವಸ್ಥೆಯಲ್ಲಿದ್ದ ದೇವಾಲಯಗಳು ಜೀರ್ಣೋದ್ಧಾರಗೊಂಡಾಗ ದೇವರ ಸಾನ್ನಿಧ್ಯ ವೃದ್ಧಿಯಾಗಿ ಊರು ಅಭಿವೃದ್ದಿಯಾಗಲಿದೆ. ನಾವೆಲ್ಲ ಜೀರ್ಣೋದ್ಧಾರ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಮುಂದಿನ ಪೀಳಿಗೆಗೆ ನಂಬಿದ ದೈವದ ಕಾರ್ಣಿಕವನ್ನು ಪರಿಚಯಿಸಬೇಕು ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಕಡಬ ತಾಲೂಕು ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕುಲು ಮತ್ತು ಕಡೆಂಜೊಡಿತ್ತಾಯಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ದ.ಕ. ಮಾಜಿ ಸಂಸದ, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಉದ್ಯಮಿ ಕೇಶವ ಅಮೈ, ಪಿಡಬ್ಲುೃಡಿ ಗುತ್ತಿಗೆದಾರ ಕರೋಡಿ ಗೋಪಾಲಕೃಷ್ಣ ಬೋರ್ಕರ್ ಶುಭಹಾರೈಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಪ್ರಮುಖರಾದ ರಾಜೇಂದ್ರ ರೈ ಮಿಜಾರುಗುತ್ತು, ಗೌರವಾಧ್ಯಕ್ಷೆ ಸುಮನಾ ಮುರಳಿಕೃಷ್ಣ, ಗೌರವ ಸಲಹೆಗಾರರಾದ ಕುಂಜಾಡಿ ಪ್ರಕಾಶ್‌ಚಂದ್ರ, ನವೀನ್ ರೈ ಮೊಗರು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ ಪ್ರಸ್ತಾವಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ ವಂದಿಸಿದರು. ಗೌರವ ಸಲಹೆಗಾರ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net