ಜವಾಬ್ದಾರಿ ಕಲಿಕೆಗೆ ಸ್ಕೌಟ್ಸ್-ಗೈಡ್ಸ್ ನೆರವು

CLK College 24
ಚಳ್ಳಕೆರೆ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೋವರ್ಸ್‌ ಮತ್ತು ರೇಂಜರ್ಸ್ ಪದಕ ತರಬೇತಿ ಶಿಬಿರವನ್ನು ಪ್ರಾಚಾರ್ಯ ಬಿ.ಎಸ್.ಮಂಜುನಾಥ ಉದ್ಘಾಟಿಸಿದರು. ಲೀಲಾವತಿ, ಎಚ್.ತಿಪ್ಪೇಸ್ವಾಮಿ, ಗಿರೀಶ್ ಇದ್ದರು.
Published on

ಚಳ್ಳಕೆರೆ: ವಿದ್ಯಾರ್ಥಿಗಳಿಗೆ ಸಮಾಜದ ಜವಾಬ್ದಾರಿಗಳನ್ನು ಕಲಿಸುವಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಬಿ.ಎಸ್.ಮಂಜುನಾಥ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಕ ಜಂಟಿ ನಿರ್ದೇಶಕರ ಕಚೇರಿ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೋವರ್ಸ್‌ ಮತ್ತು ರೇಂಜರ್ಸ್ ಪದಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಬೆಳೆಯಬೇಕು. ಇದರಿಂದ ಶಿಕ್ಷಣದ ಸಾಧನೆ ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿ ದಿಸೆಯಲ್ಲಿ ಸಾಧನೆ ಮಾಡುವ ಗುರಿ ಇರಬೇಕು. ಇಂತಹ ತರಬೇತಿ ಚಟುವಟಿಕೆಗಳು ಜಾಗೃತಿ ಮಾಡುವ ಮೂಲಕ ಶಿಕ್ಷಣ ಮತ್ತು ಜವಾಬ್ದಾರಿ ಬೆಳವಣಿಗೆಗೆ ದಾರಿ ಮಾಡುತ್ತವೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ನೋಡಲ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣ ಗುರಿ ಸಾಧನೆಯಲ್ಲಿ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅದರ ಜತೆ ಸಾಮಾಜಿಕ ಜವಾಬ್ದಾರಿ ಕಲಿಸುವ ತರಬೇತಿ ಮತ್ತು ಸ್ವಯಂ ಭದ್ರತೆ ಕಂಡುಕೊಳ್ಳುವ ಕೌಶಲ ಬೇಕಿದೆ. ಇದರಿಂದ ಮಾತ್ರ ಸ್ಪರ್ಧಾ ಸಮಾಜದಲ್ಲಿ ಉದ್ಯೋಗ ಭದ್ರತೆ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಪ್ರಾಧ್ಯಾಪಕರಾದ ಡಾ.ಆರ್.ಗಂಗಾಧರ್, ಲೀಲಾವತಿ, ಜಗನ್ನಾಥ್, ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net