ವಸತಿ ನಿಲಯಕ್ಕೆ ಪರವಾನಗಿ ನೀಡಬಾರದು

Oplus_16908288
Oplus_16908288
Published on

ಹಿರೇಬಾಗೇವಾಡಿ: ಇಲ್ಲಿನ ಬಸವನಗರದ ಬಿ.ಕೆ. ಇಟಗಿ ರಾಷ್ಟ್ರೀಯ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ಅನಧಿಕೃತಅವಾಗಿ ನಡೆಸುತ್ತಿದ್ದ ವಸತಿ ನಿಲಯ (ಹಾಸ್ಟೆಲ್​)ಕ್ಕೆ ಪರವಾನಗಿ ನೀಡಬಾರದೆಂದು ಆಗ್ರಹಿಸಿ ಬಸವನಗರ ನಿವಾಸಿಗಳು ಶನಿವಾರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

15 ವರ್ಷಗಳಿಂದ ಯಾವುದೇ ಪರವಾನಗಿ ಇಲ್ಲದೇ ಅನಧಿಕೃತವಾಗಿ ನಡೆಸುತ್ತಿರುವ ವಸತಿ ನಿಲಯದ ತ್ಯಾಜ್ಯವನ್ನು ಚರಂಡಿಗಳಿಗೆ ಹರಿ ಬಿಡಲಾಗುತ್ತಿದ್ದು, ದುರ್ನಾತ ಬೀರುತ್ತಿದೆ. ಸಾಂಕ್ರಾಮಿಕ ರೋಗ ರುಜಿನುಗಳ ಭೀತಿಯಾಗುತ್ತಿದೆ. ಈ ಕುರಿತು ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಬಿಇಒ ಗಮನಕ್ಕೆ ತಂದಿದ್ದರಿಂದ ವಸತಿ ನಿಲಯ ಬಂದ್​ ಮಾಡಿಸಿದ್ದಾರೆ. ಆದರೆ ಈಗ ಅಧಿಕೃತವಾದ ಪರವಾನಗಿ ಸಲುವಾಗಿ ಪ್ರಯತ್ನಗಳು ನಡೆದಿದ್ದು, ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಪರವಾನಗಿ ನೀಡಬಾರದೆಂದು ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಗ್ರಾಪಂ ಅಧ್ಯೆ ಜಯಶ್ರೀ ಜಪ್ತಿ ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಸೂಕ್ತ ಕ್ರಮ ಕೆಗೊಳ್ಳುವ ಭರವಸೆ ನೀಡಿದರು.

ಬಸವನಗರದ ನಿವಾಸಿಗಳಾದ ಉಮೇಶ ನಂಕಿದಿ, ಉಳವಪ್ಪ ನಂದಿ, ಮಹಾಂತೇಶ ನಂದಿ, ಆನಂದ ನಂದಿ, ಶಿವನಪ್ಪ ನಂದಿ, ಚಂದ್ರಶೇಖರ ನಂದಿ, ಮುದಕಪ್ಪ ನಂದಿ, ಬಸವ್ವ ನಾವಲಗಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net