ಸಂಶೋಧನಾ ಗುಣ ಬೆಳೆಸುವ ಮೇಳಗಳು

9SND-01
ಸಿಂಧನೂರಿನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಆವಿಷ್ಕಾರ ಮೇಳದಲ್ಲಿ ಮಕ್ಕಳ ವಿಜ್ಞಾನ ಮಾದರಿಗಳನ್ನು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ವೀಕ್ಷಿಸಿದರು. ಮುಖ್ಯಶಿಕ್ಷಕ ವೀರೇಶ ಗೋನ್ವಾರ, ಶಿಕ್ಷಕ ರಾಮದಾಸ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಪ್ಪ, ಬಾಲಕರ ಪ್ರೌಢ ಶಾಲೆ ಮುಖ್ಯಶಿಕ್ಷಕಿ ಸಮತ ಶರ್ಮ ಇದ್ದರು.
Published on

ಸಿಂಧನೂರು: ವಿಜ್ಞಾನ ಮೇಳಗಳಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಲಿದೆ. ಸದಾ ಹೊಸದನ್ನು ಸಂಶೋಧಿಸುವ ಗುಣ ಬೆಳೆಸಲಿದೆ ಎಂದು ಕಲಮಂಗಿ ಪ್ರೌಢಶಾಲೆ ಶಿಕ್ಷಕ ವೀರೇಶ ಗೋನವಾರ ಹೇಳಿದರು.

ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಮಗ್ರ ಶಿಕ್ಷಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಆವಿಷ್ಕಾರ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವರ್ಷಪೂರ್ತಿ ಶೈಕ್ಷಣಿಕ ಚಟುವಟಿಕೆ ರೂಪಿಸುತ್ತಿದೆ. ವಿಜ್ಞಾನ ಮಾದರಿಗಳು ಕೂಡ ಅವರಲ್ಲಿ ಹುಡುಕಾಟದ ಮನೋಭಾವ ಬೆಳೆಸುತ್ತವೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ದೈನಂದಿನ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿರುವ ವಿವಿಧ ವಿಜ್ಞಾನ ಮಾದರಿಗಳನ್ನು ರಚಿಸಿರುವ ಮಕ್ಕಳ ಪ್ರತಿಭೆ ಮೆಚ್ಚುವಂಥದ್ದಾಗಿದೆ. ಅವರಿಗೆ ಪ್ರೋತ್ಸಾಹ ನೀಡಿ, ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯಲಿ ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ, ಬಾಲಕರ ಪ್ರೌಢ ಶಾಲೆ ಮುಖ್ಯಶಿಕ್ಷಕಿ ಸಮತ ಶರ್ಮ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ರವೀಂದ್ರಗೌಡ, ರಾಮದಾಸ ನಾಯ್ಕ, ಮೌಲಾನಾ ಆಜಾದ್ ಶಾಲೆ ಮುಖ್ಯಶಿಕ್ಷಕ ಬಸವರಾಜ, ಮಿನಿ ವಿಜ್ಞಾನ ಕೇಂದ್ರದ ಸಂಚಾಲಕ ಶಿವಗೇನಪ್ಪ, ಶಿಕ್ಷಕರಾದ ವಾಸಂತಿ, ಅಂಜನಾದೇವಿ, ತುಳಸಿದಾಸ್, ವೀರೇಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net