ಲಿಫ್ಟ್‌ನಲ್ಲಿ ಸಿಲುಕಿಕೊಂಡವರ ರಕ್ಷಣೆ

Help Lift
Published on

ಕಾಸರಗೋಡು: ಉಪ್ಪಳ ಬಸ್ ನಿಲ್ದಾಣ ಸನಿಹದ ಕಟ್ಟಡದಲ್ಲಿ ಲಿಫ್ಟ್ ಒಳಗೆ ಸಿಲುಕಿಕೊಂಡ ನಾಲ್ವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ನಾಲ್ವರು ಯುವಕರ ತಂಡ ಬಸ್ ನಿಲ್ದಾಣ ಸನಿಹದ ಫ್ಲಾೃಟ್ ಒಂದರ ನೆಲಮಹಡಿಯಿಂದ ಎರಡನೇ ಅಂತಸ್ತಿಗೆ ತೆರಳುವ ಮಧ್ಯೆ ಲಿಫ್ಟ್ ಸ್ಥಗಿತಗೊಂಡಿತ್ತು. ಲಿಫ್ಟ್‌ನಲ್ಲಿ ಸಿಲುಕಿಕೊಂಡವರು ತಕ್ಷಣ ಫ್ಲಾೃಟ್‌ನಲ್ಲಿರುವ ಇತರರಿಗೆ ಮಾಹಿತಿ ನೀಡಿದ್ದಾರೆ. ಫ್ಲಾೃಟ್ ನಿವಾಸಿಗಳು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಲಿಫ್ಟ್‌ನ್ನು ಫ್ಲಾೃಟ್‌ನ ಎರಡನೇ ಮಹಡಿಗೆ ತಲುಪಿಸಿ ನಾಲ್ಕು ಮಂದಿಯನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net