ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಸಂಪನ್ನ

udp-2-shiruru
Published on

ಉಡುಪಿ: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ 10 ದಿನ ನಡೆದ ನವರಾತ್ರಿ ಉತ್ಸವ ಗುರುವಾರ ವಿಜಯದಶಮಿಯಂದು ಸಂಪನ್ನಗೊಂಡಿತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ನೀಲಾವರ ಮಹಿಷಮರ್ಧನಿ, ಕಡಿಯಾಳಿ ಮಹಿಷಮರ್ಧಿನಿ, ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನ, ಕುಂಜಾರುಗಿರಿ ದುರ್ಗಾಪರಮೇಶ್ವರಿ ದೇವಸ್ಥಾನ, ಅಂಬಲಪಾಡಿ ಮಹಾಕಾಳಿ&ಜನಾರ್ದನ ದೇವಸ್ಥಾನಗಳಲ್ಲಿ ನಡೆದ ವಿಶೇಷ ಪೂಜೆ, ಚಂಡಿಕಾ ಯಾಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವಿಜಯದಶಿಮಿಯಂದು ದೇವಿ ದೇವಸ್ಥಾನಗಳಲ್ಲಿ ನೂರಾರು ಮಂದಿ ಪೋಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಆಯುಧ ಪೂಜೆ

ಜಿಲ್ಲೆಯ ಕೈಗಾರಿಕಾ ಟಕ, ವಿವಿಧ ಪೊಲೀಸ್​ ಠಾಣೆ, ಅಂಗಡಿಗಳಲ್ಲಿ ಮಹಾನವಮಿ ಅಂಗವಾಗಿ ಬುಧವಾರ ಆಯುಧಪೂಜೆ ನೆರವೇರಿತು. ಜಿಲ್ಲಾ ಸಶಸ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನದಲ್ಲಿ ಆಯುಧ ಪೂಜೆ ನಡೆಯಿತು. ಅಜ್ಜರಕಾಡು ಸಾರಥಿ ಭವನ ಮುಂಭಾಗ ಸರ್ಕಾರಿ ವಾಹನಗಳಿಗೆ ವಾಹನ ಪೂಜೆ ಜರಗಿತು.

ತೆನೆಹಬ್ಬ

ಜಿಲ್ಲೆಯ ಹೆಚ್ಚಿನ ದೇವಾಲಯ ಮತ್ತು ಮನೆಗಳಲ್ಲಿ ಮಹಾನವಮಿ ಮತ್ತು ವಿಜಯದಶಮಿ ಅಂಗವಾಗಿ ತೆನೆ ಹಬ್ಬ ನಡೆಯಿತು. ಕೃಷ್ಣ ಮಠದಲ್ಲಿ ಕದಿರು ಕಟ್ಟುವ ಕಾರ್ಯ ನೆರವೇರಿತು.

ಇಂದಿನಿಂದ ಕೃಷ್ಣ ಮಠದಲ್ಲಿ ಪಕ್ಷಿಮ ಜಾಗರ ಪೂಜೆ

ಕೃಷ್ಣ ಮಠದಲ್ಲಿ ಶುಕ್ರವಾರದಿಂದ ಪ್ರಾರಂಭಿಸಿ 1 ತಿಂಗಳವರೆಗೆ ಪಮ ಜಾಗರ ಪೂಜೆ ಬೆಳಗ್ಗೆ 5.45ಕ್ಕೆ ನಡೆಯಲಿದೆ. ಯೋಗನಿದ್ರೆಯಲ್ಲಿರುವ ಭಗವಂತನನ್ನು ವಿವಿಧ ಪ್ರಕಾರದ ವಾದನಗಳನ್ನು ನುಡಿಸಿ ಎಬ್ಬಿಸುವ ಪೂಜಾ ವಿಧಾನ ಪಮ ಜಾಗರ ಪೂಜೆ. ಬೆಳಗ್ಗೆ 3.45ರಿಂದ 5.45ವರೆಗೆ ಮಠದಲ್ಲಿ ನಿತ್ಯ ಉಪಯೋಗಿಸುವಂತಹ ವಾದ್ಯಗಳ ಜತೆಗೆ ಕೆಲವು ವಿಶೇಷ ವಾದ್ಯಗಳ ವಾದನ ನಡೆಯುತ್ತದೆ. ಶಂಖನಾದ, ನಗಾರಿ, ಬಾರ್​ ತಂಬೂರಿ, ರಣಕಹಳೆ, ಡೋಲು, ದಮಣಿ, ತ್ರಾಸೆ, ಉಡುಕು ನಾಗಸ್ವರ, ಸೂರ್ಯವಾದ್ಯ, ಸ್ಯಾಕ್ಸೋಫೋನ್​ ಹಾಗೂ ಸುತ್ತಮುತ್ತಲಿನ ಕೊಳಲು, ವೀಣೆ, ವಯೋಲಿನ್​ ವಾದನ ನಡೆಯಲಿದೆ. ಒಂದು ತಿಂಗಳು ನಡೆಯುವ ಪಮಜಾಗರ ಪೂಜೆ ಉತ್ಥಾನ ದ್ವಾದಶಿಯಂದು ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net