ಗೂಡ್ಸ್​ ವಾಹನದಲ್ಲಿದ್ದ ಕರುಗಳ ರಕ್ಷಣೆ

Published on

ಕುದೂರು: ಹೋಬಳಿಯ ಹುಲಿಕಲ್​ ಗ್ರಾಮದಲ್ಲಿ ಗೂಡ್ಸ್​ ವಾಹನದಲ್ಲಿ ಸಾಗಿಸುತ್ತಿದ್ದ 10 ಕರುಗಳನ್ನು ಕುದೂರು ಪೊಲೀಸರು ಸೋಮವಾರ ರಸಿದ್ದಾರೆ.

ಕಸಾಯಿಖಾನೆಗೆ ಸಾಗಿಸಲು ಎಮ್ಮೆ ಹಾಗೂ ಹಸುವಿನ ಕರುಗಳನ್ನು ಗಾಡಿಯಲ್ಲಿ ಸಾಗಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮೇರೆಗೆ ದಾಳಿ ಮಾಡಿದ ಪೊಲೀಸರು ಕರುಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದಾನೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net