ನಾಯಿ ದಾಳಿಗೆ ತುತ್ತಾಗಿದ್ದ ಸಾರಂಗ ರಕ್ಷಣೆ

3HNL6
Published on

ಹಾನಗಲ್ಲ: ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಸಾರಂಗವೊಂದನ್ನು ತಾಲೂಕಿನ ಕೊಪ್ಪರಸಿಕೊಪ್ಪದ ಗ್ರಾಮಸ್ಥರು ಶನಿವಾರ ಬೆಳಗ್ಗೆ ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೊಪ್ಪರಸಿಕೊಪ್ಪ ಗ್ರಾಮಕ್ಕೆ ಬಂದಿದ್ದ ಸಾರಂಗವೊಂದು ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡಿತ್ತು. ಗ್ರಾಮದ ಆರ್.ಎಸ್. ಪಾಟೀಲ ಎಂಬುವವರ ದನದ ಕೊಟ್ಟಿಗೆಯಲ್ಲಿ ಅವಿತು ಕುಳಿತಿತ್ತು. ಗ್ರಾಮಸ್ಥರಾದ ವಿಶಾಲ ಪಾಟೀಲ, ಮೃತ್ಯುಂಜಯ ಲೂತಿಮಠ, ಶಿವಾಜಿ ಸಾಳುಂಕೆ, ಮಂಜು ಬಿಂಗಾಪುರ, ಸಿದ್ರಾಮಪ್ಪ ಬಂಗಾರಿ, ರಾಮು ಸಮ್ಮಸಗಿ, ವೀರಭದ್ರಪ್ಪ ಮತ್ತಿಹಳ್ಳಿ ಇತರರು ಸಾರಂಗವನ್ನು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕಾತೂರಿನ ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸಾರಂಗ ಉಪಚರಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net