ವೈಲವಾಡ ಕ್ಷೇತ್ರಕ್ಕೆ 2 ಸದಸ್ಯ ಸ್ಥಾನ ನೀಡಲು ಆಗ್ರಹ

Gramayana Logo
Published on

ಕಾರವಾರ: ಹೆಚ್ಚುವರಿ ಸದಸ್ಯ ಸ್ಥಾನ ನೀಡದ ಕಾರಣ ವೈಲವಾಡ ಗ್ರಾಪಂ ವ್ಯಾಪ್ತಿಯ ವೈಲವಾಡ ಕ್ಷೇತ್ರದ ನಾಗರಿಕರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಒಟ್ಟು 5 ಕ್ಷೇತ್ರ ಹೊಂದಿರುವ ವೈಲವಾಡ ಗ್ರಾಪಂನಲ್ಲಿ 3 ಸ್ಥಾನಗಳು ಸಿದ್ದರ ಕ್ಷೇತ್ರಕ್ಕೆ 1 ಸ್ಥಾನವನ್ನು ಖಾರ್ಗೆಜೂಗಕ್ಕೆ ಹಾಗೂ ಇನ್ನೊಂದು ಸ್ಥಾನವನ್ನು ವೈಲವಾಡ ಕ್ಷೇತ್ರಕ್ಕೆ ಹಂಚಲಾಗಿದೆ. ಕ್ಷೇತ್ರವನ್ನು ಎಸ್​ಸಿಗೆ ಮೀಸಲಿರಿಸಲಾಗಿದೆ.

ವೈಲವಾಡ ಕ್ಷೇತ್ರದ ವ್ಯಾಪ್ತಿಗೆ ಮಾಂಡೆಬೋಳ, ವೈಲವಾಡ, ಪಾಕಳೆಶಿಟ್ಟಾ, ಸಕಲವಾಡ, ಬೋಡಜೂಗ, ಅಂಬೇಡ್ಕರ್​ನಗರ, ಉಮ್ಮಳೆಜೂಗ ಮಜರೆಗಳಿವೆ. 2011ರ ಜನಗಣತಿಯ ಪ್ರಕಾರ 790 ಜನಸಂಖ್ಯೆ ಇದ್ದು, 673 ಮತದಾರರಿದ್ದಾರೆ. ಇಷ್ಟು ದೊಡ್ಡ ವ್ಯಾಪ್ತಿಗೆ ಒಬ್ಬ ಸದಸ್ಯನಿದ್ದರೆ ಅನುದಾನ ಸಾಕಾಗದು. ಅನುದಾನವನ್ನು ಸದಸ್ಯ ಸ್ಥಾನದ ಆಧಾರದ ಮೇಲೆ ಹಂಚಿಕೊಂಡರೆ ವೈಲವಾಡಕ್ಕೆ ಅತಿ ಚಿಕ್ಕ ಪಾಲು ಸಿಗುತ್ತದೆ. ಇದರಿಂದ ಸಣ್ಣ ಅಭಿವೃದ್ಧಿ ಕಾರ್ಯವೂ ನಡೆಯುವುದಿಲ್ಲ. ನಮಗೆ ತೀವ್ರ ಅನ್ಯಾಯವಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಮತ. ವೈಲವಾಡ ಕ್ಷೇತ್ರಕ್ಕೆ ಎರಡು ಸದಸ್ಯ ಸ್ಥಾನ ನೀಡುವಂತೆ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಅದಕ್ಕೆ ಸ್ಪಂದನೆ ದೊರೆಯಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕಳೆದ ಎರಡು ಚುನಾವಣೆಗಳಲ್ಲಿ ಈ ಭಾಗದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಆದರೆ, ಎರಡು ದ್ವೀಪ ಹಾಗೂ ಇನ್ನೂ ನಾಲ್ಕೈದು ಊರುಗಳು ಸೇರಿ ಇಷ್ಟು ದೊಡ್ಡ ಕ್ಷೇತ್ರಕ್ಕೆ ಒಬ್ಬ ಸದಸ್ಯ ಕೆಲಸ ಮಾಡಲು ಸಾಧ್ಯವಿಲ್ಲ. ಇದರಿಂದ ಗ್ರಾಪಂ ಚುನಾವಣೆಗೆ ಯಾರೂ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದೇವೆ. ಹಾಗೊಮ್ಮೆ ಯಾರಾದರೂ ಸ್ಪರ್ಧೆ ಮಾಡಿದರೂ ನಾವ್ಯಾರು ಮತ ಹಾಕಬಾರದು ಎಂದು ಸಭೆ ಮಾಡಿ ನಿರ್ಣಯ ಮಾಡಿದ್ದೇವೆ. ಈ ಕುರಿತು ಜಿಲ್ಲಾಧಿಕಾರಿಗೂ ಮನವಿ ನೀಡಲಿದ್ದೇವೆ. ರವಿಕಾಂತ ಸಾವಂತ ಖಾರ್ಗಾ ನಿವಾಸಿ

ಸೋಮನಕುಳಿ ಮಜರೆಯಲ್ಲಿ ಮತದಾನ ಬಹಿಷ್ಕಾರ

ಸಿದ್ದಾಪುರ: ಮೂಲಸೌಲಭ್ಯ ಒದಗಿಸದಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯ ಹೇಮಗಾರ ಗ್ರಾಮದ ಸೋಮನಕುಳಿ ಮಜರೆ ನಿವಾಸಿಗಳು ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸ್ಥಳೀಯರಾದ ರಾಜು ನಾರಾಯಣ ನಾಯ್ಕ, ಶೋಭಾ ರಾಜು ನಾಯ್ಕ, ಕನ್ನೆ ನಾರಾಯಣ ನಾಯ್ಕ, ಮಂಜುನಾಥ ನಾರಾಯಣ ನಾಯ್ಕ, ಲಲಿತಾ ಈಶ್ವರ ನಾಯ್ಕ, ಗಿರೀಶ ಈಶ್ವರ ನಾಯ್ಕ, ತಿಮ್ಮ ದ್ಯಾವಾ ನಾಯ್ಕ ಸೋಮನಕುಳಿ ಇತರರು, ‘ನಮ್ಮ ಮಜರೆಯನ್ನು ಪ್ರತಿನಿಧಿಸುವ ಗ್ರಾಪಂ, ತಾಪಂ, ಜಿಪಂ, ಶಾಸಕ ಹಾಗೂ ಸಂಸದರು ಯಾವುದೇ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡರೂ ಇಲ್ಲಿಯವರೆಗೂ ಸ್ಪಂದಿಸಿಲ್ಲ. ಇದರಿಂದಾಗಿ ನಾವೆಲ್ಲ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ನಮ್ಮ ಮಜರೆಗೆ ಮೂಲಸೌಕರ್ಯಗಳು ದೊರಕಿ ಸುಧಾರಣೆ ಆಗುವ ಸಂಪೂರ್ಣ ಭರವಸೆ ಸಿಗುವವರೆಗೂ ಗ್ರಾಪಂ ಸೇರಿದಂತೆ ಮುಂಬರುವ ಯಾವುದೆ ಚುನಾವಣೆಗಳಲ್ಲೂ ಮತದಾನ ಬಹಿಷ್ಕರಿಸಲು ತೀರ್ವನಿಸಿದ್ದೇವೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net