

ಮಹದೇವಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಕಾರ್ಯಕರ್ತರು ಶೀಗೆಹಳ್ಳಿಯಲ್ಲಿ ಬೌದ್ದ ಧರ್ಮ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿದ್ದು, ಪ್ರಸ್ತುತ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸುವಂತೆ ತಿಳಿಸಿದ್ದಾರೆ.
ಬೆಂ. ಪೂರ್ವ ತಾಲ್ಲೂಕು ಸಮಿತಿ ವತಿಯಿಂದ ಮನೆಮನೆಗೆ ಬುದ್ದ ಎನ್ನುವ ಘೋಷವಾಕ್ಯದೊಂದಿಗೆ ನಡೆದ ದಾಖಲಾತಿ ಆಂದೋಲನದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಎಂ.ಆರ.ವೆಂಕಟೇಶ್, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಜನಗಣತಿಯು ವೈಜ್ಞಾನಿಕವಾಗಿದ್ದು, ಜನಗಣತಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಜತೆಗೆ ಪ್ರತಿಯೊಬ್ಬರೂ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಸೇರಿ ಜಾತಿ ಕಾಲಂನಲ್ಲಿ ಬೌದ್ಧ ಎಂದು ಬರೆಸಿ ಉಪಜಾತಿಯಲ್ಲಿ ತಮ್ಮ ಜಾತಿಗಳನ್ನು ಬರೆಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೆಯದ ಜತೆಗೆ ಘನತೆಯನ್ನು ಎತ್ತಿ ಹಿಡಿಯಬೇಕು. ರಾಷ್ಟ್ರದ ವಿವಿಧ 39 ದೇಶಗಳು ನಮ್ಮ ದೇಶದ ಬೌದ್ಧ ಧರ್ಮವನ್ನು ಅನುಕರಿಸುತ್ತಿವೆ. ನಾವು ಕೂಡ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೌದ್ಧ ಧರ್ಮ ಪಸರಿಸುವ ಕೆಲಸ ಮಾಡೋಣ ಎಂದರು.
ಜಿಲ್ಲಾ ಸಂಚಾಲಕ ಮಹೇಂದ್ರಕುಮಾರ್, ಬೆಂ.ಪೂ.ತಾ ಅಧ್ಯಕ್ಷ ರವಿಕುಮಾರ್, ಪೂರ್ವ ತಾಲ್ಲೂಕು ಸಂಚಾಲಕ ನಾಗರಾಜ್, ನಲ್ಲೂರಹಳ್ಳಿ ಶಿವಣ್ಣ, ಕಾನೂನು ಸಲಹೆಗಾರ ವಿಜಯನ್, ಮುಖಂಡರಾದ ರಾಮಕೃಷ್ಣ, ಬಿ.ಆರ್.ವೆಂಕಟೇಶ್, ದಿನ್ನೂರು ಮುನಿವೆಂಕಟಮ್ಮ, ಹಜೀರಾಪಾರು, ಪೊಲ್ಲಪ್ಪ, ಮುನಿಯಪ್ಪ ಮತ್ತಿತರರಿದ್ದರು.