ಸರ್ಕಾರಿ ಜಾಗ ಒತ್ತುವರಿಗೆ ತೆರವಿಗೆ ಮನವಿ

oppo_0
oppo_0
Published on

ಬೈಲಕುಪ್ಪೆ: ಸರ್ಕಾರಿ ಜಾಗ ಹಾಗೂ ಕೆರೆ ಕಟ್ಟೆಗಳ ಒತ್ತುವರಿ ತೆರವು ಮಾಡುವಂತೆ ತಾಲೂಕಿನ ಪಿರಿಯಾಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ವಿ. ರಾಜೇಂದ್ರ ಮತ್ತು ಕಾರ್ಯಕರ್ತರು ತಹಸೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಮಾಡಿದರು.


ತಹಸೀಲ್ದಾರ್ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಮಾತನಾಡಿದ ಮುಖಂಡರು, ಪಿರಿಯಾಪಟ್ಟಣ ತಾಲೂಕಿನ ಕೊಪ್ಪ, ಬೈಲಕುಪ್ಪೆ, ಆವರ್ತಿ, ಮುತ್ತಿನ ಮುಳುಸಾಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಜಮೀನಿಗೆ ತೆರಳಲು ರಸ್ತೆಯೇ ಇಲ್ಲದಂತಾಗಿದೆ. ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ. ಸ್ಮಶಾನ, ಕೆರೆ ಕಟ್ಟೆಗಳ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ತೆರವು ಮಾಡಬೇಕು ಎಂದು ಕೋರಿದರು.


ದರಖಾಸ್ತು ಸಮಿತಿ ಮಾಜಿ ಸದಸ್ಯ ಬೆಮ್ಮತಿ ಚಂದ್ರು, ಲೋಕಪಾಲಯ್ಯ, ಟಿ.ರಮೇಶ್, ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net