

ಸಿದ್ದಾಪುರ: ಹೊದವಾಡ-ಕೇಮಾಡ್ ಮುಖ್ಯರಸ್ತೆ ಸಮಸ್ಯೆ ಹಾಗೂ, ಹೊದವಾಡ, ಅಜಾದ್ ನಗರ ಖಬರಸ್ಥಾನ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರನ್ನು ಇತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮಳೆಗಾಲದಲ್ಲಿ ಹೊದವಾಡ-ಕೇಮಾಡ್ ರಸ್ತೆಯಲ್ಲಿ ಸಂಚರಿಸಲು ಕಷ್ಟಸಾಧ್ಯ. ಶಾಲಾ ವಿದ್ಯಾರ್ಥಿಗಳಿಗೆ ತೊಂದೆಯಾಗುತ್ತಿದೆ ಎಂದು ಹೊದವಾಡ ಗ್ರಾಮಸ್ಥರು ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.
ಮನವಿ ಸ್ಪಂದಿಸಿದ ಶಾಸಕ ಡಾ.ಮಂತರ್‌ಗೌಡ ಅವರು,ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಆರಂಭಗೊಳ್ಳಲಿದ್ದು, ಮಳೆಗಾಲ ಕಳೆದ ನಂತರ ತಕ್ಷಣ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಹೊದವಾಡ-ಅಜಾದ್ ನಗರ ಜಮಾಅತ್ ಅಧ್ಯಕ್ಷ ಪಿ.ಯು ಅಹ್ಮದ್,ಉಪಾಧ್ಯಕ್ಷರಾದ ಮುಹಮ್ಮದ್, ಕೆ.ಎ. ಇಸ್ಮಾಯಿಲ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೈಸಿ ಕತ್ತಣಿರ, ಹಮೀದ್, ಝಕರಿಯಾ,ಬಶೀರ್ ಇದ್ದರು.