

ರೆಪ್ಕೋ ಬ್ಯಾಂಕ್ (ಭಾರತದ ಸರ್ಕಾರದ ಉದ್ಯಮ) 56ನೇ ಸಂಸ್ಥಾಪನಾ ದಿನದ ಅಂಗವಾಗಿ ತನ್ನ ಶಾಖೆಗಳ ಮೂಲಕ 56 ಸಾವಿರ ಸಸಿಗಳನ್ನು ನೆಡುವ ಒಂದು ತಿಂಗಳ ಅಭಿಯಾನ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಪೇಡ್ ಮಾ ಕೆ ನಾಮ್’ ಎಂಬ ೋಷಣೆಯಿಂದ ಪ್ರೇರಿತವಾಗಿ ಸಂಸ್ಥೆ ಈ ಅಭಿಯಾನ ಕೈಗೊಂಡಿದೆ. ಇದರ ಭಾಗವಾಗಿ ರೆಪ್ಕೋ ಬ್ಯಾಂಕ್ ಬಸವೇಶ್ವರನಗರ ಶಾಖೆಯು ಗ್ರಾಹಕರಿಗೆ ಉಚಿತ ಸಸಿಗಳನ್ನು ವಿತರಿಸುವ ಕಾರ್ಯ ಕೈಗೊಂಡಿದೆ. ಶಾಖೆಯ ಮುಖ್ಯಸ್ಥ ಎಂ. ರಮೇಶ್ ಬಾಬು ಅವರು ಡಿಜಿಎಂ ಪುಷ್ಕಲಾ ನರೇಶ್, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.