ವಿಜಯವಾಣಿ ಸುದ್ದಿಜಾಲ ಪಾತಪಾಳ್ಯ
ಬೈರೇಗೊಲ್ಲಪಲ್ಲಿ ಗೊಲ್ಲಪಲ್ಲಿ ಮಾರ್ಗ ಮಧ್ಯದ ಶುದ್ಧ ನೀರಿನ ಘಟಕ ರಿಪೇರಿ ಮಾಡಿದರೆ ಗ್ರಾಮಸ್ಥರು ್ಲೋರೈಡ್ ಮುಕ್ತ ನೀರು ಪಡೆಯಲು ಅನುಕೂಲವಾಗುತ್ತದೆ.
ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬೈರೇಗೊಲ್ಲಪಲ್ಲಿ ಊರ ಹೊರಭಾಗದಲ್ಲಿ ್ಲೋರೈಡ್ ಮುಕ್ತ ನೀರು ಪಡೆಯಲು ಶುದ್ಧ ಘಟಕ ಸ್ಥಾಪಿಸಿದರು.ಇದರಿಂದ ಬೈರೇಗೊಲ್ಲಪಲ್ಲಿ, ಗೊಲ್ಲಪಲ್ಲಿ ಜನರಿಗೆ ಅನುಕೂಲವಾಗಿತ್ತು. 6 ತಿಂಗಳ ಹಿಂದೆ ಘಟಕ ಕೆಟ್ಟಿದ್ದು, ಇದುವರೆಗೆ ರಿಪೇರಿ ಮಾಡಿಲ್ಲ. ಇದರಿಂದ 3 ಕಿ.ಮೀ ದೂರದ ಪಾತಪಾಳ್ಯಕ್ಕೆ ಹೋಗಿ ನೀರು ತರಬೇಕಾಗಿದೆ. ರೈತಾಪಿ ಜನರು, ಕೂಲಿ ಕಾರ್ಮಿಕರೇ ಹೆಚ್ಚಿರುವ ಗ್ರಾಮದಲ್ಲಿ ನೀರು ತರಲು ಹೋದರೆ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ವಹಿಸಿಲ್ಲ.
ಗೊಲ್ಲಪಲ್ಲಿಗೆ ಭೇಟಿ ನೀಡಿ ಶುದ್ಧ ನೀರಿನ ಘಟಕ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಲಾಗುವುದು-.
| ವೆಂಕಟರವಣಪ್ಪ, ಪಿಡಿಒ, ತೋಳ್ಳಪಲ್ಲಿ
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಗೊಲ್ಲಪಲ್ಲಿ, ಬೈರೇಗೊಲ್ಲಪಲ್ಲಿಗೆ ಸರಬರಾಜು ಆಗುತ್ತಿದ್ದ ನೀರಿನ ಘಟಕ ರಿಪೇರಿ ಮಾಡಿದರೆ ದೂರದ ಊರುಗಳಿಗೆ ಹೋಗಿ ನೀರು ತರುವುದು ತಪ್ಪುತ್ತದೆ.
|ಮಂಜುನಾಥ, ಸ್ಥಳಿಯ ಗೊಲ್ಲಪಲ್ಲಿ