

ಮೂಲ್ಕಿ: ಮಂಗಳೂರಿನ ಮಹಾನಗರ ಪಾಲಿಕೆಯ ತುಂಬೆಯ ನೀರಿನ ಸ್ಥಾವರದಿಂದ ಮೂಲ್ಕಿ ನಗರ ಪಂಚಾಯಿತಿಗೆ ಕುಡಿಯುವ ನೀರಿನ ಸರಬರಾಜು ಪೈಪು ಒಡೆದು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯ ಬಿಲ್ಲವ ಸಂಘದ ಬಳಿ ಕಳೆದ 15 ದಿನಗಳಿಂದ ಪೋಲಾಗುತ್ತಿರುವ ಕುರಿತು ವಿಜಯವಾಣಿ ಸೋಮವಾರ ವಿಸ್ತೃತ ಪರದಿ ಪ್ರಕಟಿಸಿತ್ತು.
ವರದಿಗೆ ತುರ್ತಾಗಿ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಹಾನಗರ ಪಾಲಿಕೆ ತಾಂತ್ರಿಕ ಇಲಾಖೆಯನ್ನು ಸಂಪರ್ಕಿಸಿ ಜೆಸಿಬಿ ಬಳಸಿ ಗುಂಡಿ ಮಾಡಿ ಪೈಪು ವೆಲ್ಡ್ ಮಾಡುವ ಮೂಲಕ ಸಮಸ್ಯೆ ಪರಿಹರಿಸಿದ್ದಾರೆ.