ಅಧ್ಯಕ್ಷರಾಗಿ ರೇಣುಕುಮಾರ್ ಅವಿರೋಧ ಆಯ್ಕೆ

13blr1
Published on

ಬೇಲೂರು: ಸನ್ಯಾಸಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರೇಣುಕುಮಾರ್ ಅವಿರೋಧ ಆಯ್ಕೆಯಾದರು.


ಜಯರಂಗೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರೇಣುಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕಿ ಶಕ್ಕು ಅವಿರೋಧ ಆಯ್ಕೆ ಘೋಷಿಸಿದರು.


ನಿರ್ದೇಶಕರಾದ ಬಿ.ಡಿ.ಚಂದ್ರೇಗೌಡ,ಪಿ.ಎಂ.ದೇವರಾಜು, ಲೋಕೇಶ್, ಕುಮಾರ್, ಬಸವರಾಜು, ದಿನೇಶ್, ಶಾರದಮ್ಮ, ಜಯರಂಗೇಗೌಡ, ಕಲಂದರ್ ಪೀರ್‌ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net