Renukaswamy ಹತ್ಯೆ ಪ್ರಕರಣ; ಜೈಲಿನಿಂದ ಮೂವರು ಆರೋಪಿಗಳು ರಿಲೀಸ್​

Darshan
Published on

ತುಮಕೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಕಾರ್ತಿಕ್​, ಕೇಶವಮೂರ್ತಿ ಹಾಗೂ ನಿಖಿಲ್​ ನಾಯಕ್​ ತುಮಕೂರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್​ನಿಂದ, ಕಾರ್ತಿಕ್​ ಹಾಗೂ ನಿಖಿಲ್​ ನಾಯಕ್​​ಗೆ 57 ನೇ ಸಿಸಿಹೆಚ್ ಕೋರ್ಟ್​ನಿಂದ ಸೆಪ್ಟೆಂಬರ್​ 23ರಂದು ಜಾಮೀನು ದೊರೆತಿತ್ತು. ಕೋರ್ಟ್​ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶ್ಯೂರಿಟಿದಾರರನ್ನು ಹೊಂದಿಸುವಂತೆ ಆರೋಪಿಗಳ ಕುಟುಂಬಸ್ಥರಿಗೆ ಕೋರ್ಟ್​ ಸೂಚಿಸಿತ್ತು.

ಜಾಮೀನು ಶ್ಯೂರಿಟಿಗೆ ಹಣವಿಲ್ಲದೇ ಆರೊಪಿಗಳ ಕುಟುಂಬಸ್ಥರು ಪರದಾಡಿದ್ದರು. ಮಂಗಳವಾರ (ಅಕ್ಟೋಬರ್​ 01) ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಜೈಲಾಧಿಕಾರಿಗಳಿಗೆ ಜಾಮೀನು ಆದೇಶದ ಪ್ರತಿ ದೊರೆತ ಬಳಿಕ ಆರೋಪಿಗಳು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸೆ.23ರಂದು ಎ15 ಆರೋಪಿ ನಿಖಿಲ್‌ ನಾಯಕ್‌, ಎ16 ಆರೋಪಿ ಕೇಶವಮೂರ್ತಿ ಹಾಗೂ ಎ17 ಆರೋಪಿ ಕಾರ್ತಿಕ್‌ಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. ಜಾಮೀನು ಪ್ರಕ್ರಿಯೆ ಮುಗಿದಿದ್ದು, ಬುಧವಾರ ಬೆಳಗ್ಗೆ 10.30ಕ್ಕೆ ತುಮಕೂರು ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ನಾಲ್ವರಲ್ಲಿ ಮೂವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು, ರವಿಶಂಕರ್‌ ಜಾಮೀನು ಸಿಗದ ತುಮಕೂರು ಜೈಲಲ್ಲೇ ಇರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net