ರೇಣುಕಾಚಾರ್ಯರ ತತ್ವ, ಚಿಂತನೆಗಳೇ ಆದರ್ಶ

FotoJet (1)
Published on

ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅನಿಸಿಕೆ

ಚಿಕ್ಕಬಳ್ಳಾಪುರ: ಆದಿ ಜಗದ್ಗುರು ರೇಣುಕಾಚಾರ್ಯರ ಆದರ್ಶ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಕರೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿ.ಪಂ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಾತನಾಡಿದ ಅವರು,

ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಅಗ್ರ ಗಣ್ಯರು. ಇವರ ತತ್ವ ಬೋಧನೆಗಳು, ಬದುಕಿನ ಚರಿತ್ರೆ ಮತ್ತು ಸಾವಾಜಿಕ ಪರಿವರ್ತನೆಯ ಹಲವು ಸಾಧನೆಗಳು ಭಾರತೀಯ ಸಾವಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ ಎಂದರು.

ಕನ್ನಡ ಭಾಷೆಯಲ್ಲಿ ರೇಣುಕಾಚಾರ್ಯರ ಬದುಕು ಮತ್ತು ತತ್ವಗಳನ್ನು ಸಾರುವ ಹಲವು ಗ್ರಂಥಗಳಿವೆ. ಇವುಗಳ ಅಧ್ಯಯನದ ಅಗತ್ಯವಿದೆ ಎಂದರು.

ರೇಣುಕಾಚಾರ್ಯರ ‘ಇಷ್ಟಲಿಂಗ‘ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ವಾಡಿದರು. ಶೈವ ತತ್ವಶಾಸವನ್ನು ಜನಸಾವಾನ್ಯರಿಗೆ ತಲುಪಿಸಲು, ದೈನಂದಿನ ಜೀವನದ ಭಾಗವನ್ನಾಗಿಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರಭಾ ನಾಗರಾಜ್ ವಾತನಾಡಿ, ರೇಣುಕಾಚಾರ್ಯರು ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಎಂಬ ಊರಿನಲ್ಲಿ ಜನಿಸಿದರು. ಆಚಾರ್ಯರು ಬಾಲ್ಯದಲ್ಲೇ ಋಷಿಗಳ ಜತೆಯಲ್ಲಿ ನಿರಂತರ ಜ್ಞಾನಸಾಧನೆಯಲ್ಲಿ ತೊಡಗಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ವಾಡಿದರು. ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ, ಶೈವ ಪರಂಪರೆಯನ್ನು ಬಲಪಡಿಸಲು ಜೀವನವನ್ನು ಮೀಸಲಾಗಿಟ್ಟಿದ್ದರು ಎಂದರು.

ದೇವರನ್ನು ಹೊರಗಿನ ಪ್ರತಿಮೆಗಳಿಂದಲ್ಲದೇ ಅಂತರಾಳದಲ್ಲಿ ಹುಡುಕಬೇಕೆಂಬ ನಂಬಿಕೆಯನ್ನು ಪ್ರಚುರ ಪಡಿಸಿ ಸವಾನತೆ ಎಂಬ ತತ್ವಕ್ಕೆ ಮಹತ್ವ ನೀಡಿದ್ದು, ಎಲ್ಲ ವರ್ಣಗಳೂ ಸವಾನವೆಂಬ ನಂಬಿಕೆಯನ್ನು ಹರಡಿದ ಆಚಾರ್ಯರು ಸ್ಥಾಪಿಸಿದ ಆಶ್ರಮವನ್ನು ಇಂದಿಗೂ ಕೂಡ ಶ್ರೀಲಂಕಾದಲ್ಲಿ ಕಾಣಬಹುದು. ಭೀಷ್ಮರು ಪ್ರತಿಷ್ಠಾಪಿಸಿರುವ 6 ಕೋಟಿ ಶಿವಲಿಂಗಗಳನ್ನು ಕಾಣಬಹುದು ಎಂದರು.

ಸಮುದಾಯದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುವಾರ್, ಮುಖಂಡರಾದ ಮಹೇಶ್ ಬಸವಪುರ, ರಾಜೇಂದ್ರ ಪ್ರಸಾದ್, ಗಂಗಾಧರ, ಮೋಹನ್ ಕುವಾರ್, ಸುನೀಲ್, ಸೋಮಶೇಖರ್, ಮಹಾಲಿಂಗಯ್ಯ, ನಾಗರಾಜ್, ಗೀತಾ ಬಸವರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net