ರೇಣುಕಾಚಾರ್ಯ ಜಯಂತ್ಯುತ್ಸವ ನಾಳೆ

oplus_2
oplus_2
Published on

ರಾಮದುರ್ಗ: ಪಟ್ಟಣದ ಮಿನಿ ವಿಧಾನಸೌಧ ಹಾಗೂ ಸ್ಥಳಿಯ ರೇಣುಕಾಚಾರ್ಯ ಸರ್ಕಲ್​ನಲ್ಲಿ ಮಾ.12ರಂದು ಬೆಳಗ್ಗೆ 10.30ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ವೀರಶೈವ ಲಿಂಗಾಯತ ಸಂಟನೆ ತಾಲೂಕಾಧ್ಯ ರಾಜೇಶ ಬೀಳಗಿ ತಿಳಿಸಿದರು.

ಪಟ್ಟಣದ ಪ್ರೆಸ್​ಕ್ಲಬ್​ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಯಂತಿ ಅಂಗವಾಗಿ ಸಾಧಕ ಮಹಿಳೆಯರ ಸನ್ಮಾನ, ಪಟ್ಟಣದ ರೇಣುಕಾಚಾರ್ಯ ಸರ್ಕಲ್​ನಲ್ಲಿ ರೇಣುಕರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು. ವೀರಶೈವ ಲಿಂಗಾಯತ ವಿವಿಧ ಸಂಟನೆಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ವೀರಶೈವ ಲಿಂಗಾಯತ ಸಂಟನೆ ತಾಲೂಕು ಉಪಾಧ್ಯ ಡಾ.ಬಿ.ಎಲ್​.ಸಂಕನಗೌಡ್ರ, ಗಂಗಾಧರಯ್ಯ ಹಿರೇಮಠ, ವೀರಭದ್ರೇಶ್ವರ ಪ್ರಚಾರ ಸಮಿತಿ ತಾಲೂಕಾಧ್ಯ ಮಹಾದೇವ ಉರಳೇಗಡ್ಡಿ, ಬಸವರಾಜ ಕೊಣನ್ನವರ, ಪ್ರಧಾನ ಕಾರ್ಯದರ್ಶಿ ಈರಬಸಯ್ಯ ಬನ್ನೂರಮಠ, ಪ್ರವಿಣ ಬನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net