

ಕೈಲಾಂಚ: ಹೋಬಳಿಯ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಅಂಜನಾಪುರದ ಹೂವಿನಮ್ಮ ದೇವಾಲಯದ ಸಮೀಪ ಹುಣಸೇಮರಕ್ಕೆ ವಿದ್ಯುತ್ ಲೈನ್ ತಾಗುತ್ತಿದ್ದು, ರೆಂಬೆಗಳನ್ನು ತೆರವುಗೊಳಿಸಿ, ಅವಡಗಳನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಬೆಸ್ಕಾಂಗೆ ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ತಂತಿಗಳು ಹುಣಸೇಮರಕ್ಕೆ ತಾಗುತ್ತಿವೆ. ಪರಿಣಾಮ ಮಳೆ ಸಂದರ್ಭದಲ್ಲಿ ಕರೆಂಟ್ ಶಾಕ್ ಅನುಭವವಾಗುತ್ತಿದೆ. ಮರಕ್ಕೆ ಹೊಂದಿಕೊಂಡಂತೆ ಮನೆಗಳಿದ್ದು, ಮಕ್ಕಳು ಮರದ ಕೆಳಗೆ ಆಟವಾಡುತ್ತಾರೆ. ಅಲ್ಲದೆ ಜಾನುವಾರುಗಳನ್ನೂ ಮರದ ಕೆಳಗೆ ಕಟ್ಟಲಾಗುತ್ತದೆ. ಅವಡಗಳು ಸಂಭವಿಸುವ ಮುನ್ನ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು, ಮರದ ರೆಂಬೆಗಳನ್ನು ತೆರವುಗೊಳಿಸಬೇಕು ಎಂದು ಅಂಜನಾಪುರ ಶಿವಕುಮಾರಸ್ವಾಮಿ ಸೇರಿ ಹಲವರು ಒತ್ತಾಯಿಸುತ್ತಿದ್ದಾರೆ.
ಕೈಲಾಂಚ ಕರೆಂಟ್
ಕೈಲಾಂಚ ಹೋಬಳಿ ಅಂಜನಾಪುರ ಗ್ರಾಮದಲ್ಲಿ ವಿದ್ಯುತ್ ಲೈನ್ಗೆ ತಾಗುತ್ತಿರುವ ಹುಣಸೇಮರ.